ಹುಬ್ಬಳ್ಳಿ : ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರರ ಕಾರ್ಯಾಲಯದಲ್ಲಿ ತಾಲೂಕು ಆಡಳಿತದಿಂದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ, ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಪ್ರಕಾಶ ನಾಶಿ, ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ್, ಸಮಾಜದ ಮುಖಂಡರಾದ ಮಂಜುನಾಥ ಬೈರನ್ನವರ, ಗುರಪ್ಪ ಜಿಡ್ಡಿ, ರಾಮಣ್ಣ ಗುಗ್ಗರಿ, ಮಂಜುನಾಥ ಗಡಿಯನ್ನವರ, ಗುರಪ್ಪ ಕರಬಣ್ಣವರ, ಬಸವರಾಜ್ ದಾಸನಾಯ್ಕಾರ್, ಯಲ್ಲಪ್ಪ ಅಳಗವಾಡಿ,
ಭೀಮಶಿ ಅಡವೆನ್ನವರ್, ರವಿ ಹಡಗಲಿ, ಬಸವರಾಜ್ ಗಡಿಯನ್ನವರ್, ಗಂಗಪ್ಪ ಬಾರಕೇರ, ಅರ್ಜುನ ಬಾರಕೇರ, ಲಕ್ಷ್ಮಣ ಅಂಬಿಗೇರ, ಗುರುನಾಥ ಸುಣಗಾರ, ಶಿವಾನಂದ್ ಬಾರಕೇರ, ಮಂಜುನಾಥ್, ಎಲ್. ಜೆ. ಅಂಬಿಗೇರ, ಹನಮಂತಪ್ಪ ನಾಯ್ಕೊಡಿ, ಸುರೇಶ್ ಹೆಬ್ಬಳ್ಳಿ, ದೊಡ್ಡಪ್ಪ ಬಾರಕೇರ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.