ಹುಬ್ಬಳ್ಳಿ: ಬಿಜೆಪಿ ಯುವ ಮುಖಂಡ ಸಕ್ರಪ್ಪ ಕಮ್ಮಾರ ಅವರನ್ನು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ಎಂ.ಆರ್.ಪಾಟೀಲ್ ಅವರನ್ನ ಇಂದು ಹುಬ್ಬಳ್ಳಿಯ ಶಾಸಕರ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಸಕ್ರಪ್ಪ ಕಮ್ಮಾರ ಅವರು ಭಾರತೀಯ ಜನತಾ ಪಕ್ಷದ ವಿವಿಧ ಮೂರ್ಚಾಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ, ವಿವಿಧ ಹುದ್ದೆಗಳನ್ನ ಜವಾಬ್ದಾರಿಯುತವಾಗಿ ನಿಭಾಯಿಸಿದ್ದಾರೆ. ಲೋಕಸಭಾ ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಸಹ ಹಿರಿಯ ನಾಯಕರು ಕೊಟ್ಟ ಜವಾಬ್ದಾರಿಯನ್ನು ಸಹ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಕಾರಣ ಸಕ್ರಪ್ಪ ಕಮ್ಮಾರ ಅವರನ್ನ ನೇಮಕ ಮಾಡುವುದರಿಂದ ಇನ್ನಷ್ಟು ಪಕ್ಷದ ಬಲವರ್ಧನೆ ಹಾಗೂ ಸಂಘಟನೆ ಆಗುತ್ತದೆ ಎಂದು ಅವರು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ
ಅಶೋಕ್ ಯೋಗಪ್ಪನವರ , ಬಸಪ್ಪ ಕಲಿವಾಳ, ರಾಜು ಮಲ್ಲಿಗವಾಡ, ಮಂಜುನಾಥ ಮಲ್ಲಿಗವಾಡ, ಸಾಗರ ಕಾಶಪ್ಪನವರ, ಗೋಪಾಲ್ ದೊಡ್ಮಮನಿ, ಸಹದೇವಪ್ಪ ಮಾಳಗಿ, ಮಹೇಶ್ ಕೋಳಿವಾಡ , ಉಪಸ್ಥಿತರಿದ್ದರು.