ಹುಬ್ಬಳ್ಳಿ: ಸಾಮಾಜಿಕ ಕಾರ್ಯಕರ್ತರು ಹಾಗೂ ಮಾನಸ ಗ್ರುಪ್ ನ ಸಂಸ್ಥಾಪಕರಾದ ಡಾ.ಆನಂದಕುಮಾರ್ ಅವರು ಬ್ಯಾಂಕಾಕ್ ನಲ್ಲಿ ನಡೆದ ಇಂಡೋಥಾಯ್ ಪ್ರೇಂಡ್ ಶಿಫ್ ಮತ್ತು ಎಕಾನಾಮಿಕ್ ಕೋ ಆಪರೇಟಿವ್ ಸಮ್ಮೇಳನದಲ್ಲಿ ಆಮಂತ್ರಿತರಾಗಿ ವಿಶೇಷ ಪುರಸ್ಕಾರಕ್ಕೆ ಭಾಜನರಾದರು.
ಇಂಟರ್ನ್ಯಾಷನಲ್ ಗೋಲ್ಡನ್ ಫಿನಾಕಲ್ ಆವಾರ್ಡ್ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.
ಥಾಯ್ಲೆಂಡ್ ಮಾಜಿ ಉಪಪ್ರಧಾನಿ ಕಾರ್ನ್ ದಬ್ಬಾರನ್ಸಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಎಂಇಎ ಹಾಗೂ ಆರ್ ಎಸ್ ವಿಪಿ ರಾಯಭಾರಿ ಕೆ.ವಿ.ರಾಜನ್ ಅಧ್ಯಕ್ಷತೆ ವಹಿಸಿದ್ದರು.
ನೂರಾರು ಪ್ರತಿನಿಧಿಗಳು, ಗಣ್ಯರು ಹಾಗೂ ವಿವಿಧ ಕ್ಷೇತ್ರದ ಸಾಧಕರು ಭಾಗವಹಿಸಿದ್ದರು.