ದಾವಣಗೆರೆ:- ರಾಜಕಾರಣಿಗಳ ನೀಚ ರಾಜಕೀಯದ ನಡುವೆ ಅಯೋಧ್ಯೆಯ ಮಂತ್ರಾಕ್ಷತೆ ಸ್ವೀಕರಿಸಿ ಮುಸ್ಲಿಂರು ಹಾರೈಸಿದ್ದಾರೆ.
ಸದ್ಯ, ದೇಶಾದ್ಯಂತ ಅಯೋಧ್ಯೆ ಮಂತ್ರಾಕ್ಷತೆ ಹಾಗೂ ರಾಮ ಮಂದಿರ ಪೋಟೋವನ್ನು ಕೂಡ ಹಿಂದೂ ಕಾರ್ಯಕರ್ತರು, ಮುಖಂಡರು, ಮನೆ ಮನೆಗೆ ತೆರಳಿ ನೀಡುತ್ತಿದ್ದಾರೆ. ಅದೇ ರೀತಿ ದಾವಣಗೆರೆ ಜಿಲ್ಲೆಯಲ್ಲೂ ನೀಡಲಾಗುತ್ತಿದ್ದು, ಮುಸ್ಲಿಂ ಸಮುದಾಯದವರೂ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಶುಭ ಹಾರೈಸಿ ಭಾವೈಕ್ಯತೆ ಸಾರಿದ್ದಾರೆ.
ಹರಿಹರ ತಾಲ್ಲೂಕಿನ ಕಡರ ನಾಯಕನಹಳ್ಳಿಯಲ್ಲಿ ವಿಭಿನ್ನವಾಗಿ ಮಂತ್ರಾಕ್ಷತೆ ರಾಮ ಮಂದಿರ ಪೋಟೋ ಮನೆ ಮನೆಗೂ ನೀಡುತ್ತಿದ್ದು, ಅದರಲ್ಲೂ ಮಹಿಳೆಯರ ತಂಡ ಮಂತ್ರಾಕ್ಷತೆ ಪೋಟೋ ಜೊತೆ ಮಹಿಳೆಯರಿಗೆ ಬಳೆ ಅರಿಶಿಣ ಕುಂಕುಮ ಕೊಟ್ಟು ಶ್ರೀರಾಮ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಭಿಯಾನ ನಡೆಸುತ್ತಿದ್ದಾರೆ.
ಈ ಅಭಿಯಾನದಲ್ಲಿ ಮುಸ್ಲಿಮರು ಕೂಡ ಭಾಗಿಯಾಗಿದ್ದು, ಅವರು ಕೂಡ ಶ್ರೀರಾಮನ ಮಂತ್ರಾಕ್ಷತೆ ಪೋಟೋ ಪಡೆದು ಸಂಭ್ರಮದಲ್ಲಿ ಭಾಗವಹಿಸಿದರು. ನಾವು ಕೂಡ ರಾಮ ಭಕ್ತರೇ. ಎಲ್ಲಾ ದೇವರು ಒಂದೇ, ನಾವು ಕೂಡ ಭಾರತೀಯರು ಎನ್ನುವುದರ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.