ಅಯೋಧ್ಯೆ (ರಾಮಮಂದಿರ): ರಾಮಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆಗಾಗಿ ಅಯೋಧ್ಯೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇಶ-ವಿದೇಶಗಳಿಂದ ಅಯೋಧ್ಯೆಗೆ ಉಡುಗೊರೆ, ಪ್ರಸಾದದ ಮಹಾಪೂರವೇ ಹರಿದುಬರುತ್ತಿದೆ. ಭಕ್ತರೊಬ್ಬರು ತಯಾರಿಸಿದ್ದ 1265 ಕೆಜಿ ತೂಕದ ಪ್ರಸಾದದ ಲಡ್ಡು (Laddoo Prasad) ಕೂಡ ಅಯೋಧ್ಯೆ (Ayodhya) ತಲುಪಿದೆ.
ಈ ಬೃಹತ್ ಪ್ರಮಾಣದ ಲಡ್ಡನ್ನು ಹೊತ್ತು ಹೈದರಾಬಾದ್ನಿಂದ ಹೊರಟಿದ್ದ ವಾಹನವು ಅಯೋಧ್ಯೆಯ ಕರಸೇವಕಪುರ ತಲುಪಿದೆ. ಈ ಲಡ್ಡನ್ನು ತಯಾರಿಸಿದ್ದು ಶ್ರೀರಾಮ ಕ್ಯಾಟರಿಂಗ್ ಸರ್ವಿಸಸ್.
ಶ್ರೀರಾಮ ಕ್ಯಾಟರಿಂಗ್ ಸರ್ವಿಸಸ್ ಮಾಲೀಕ ಎನ್.ನಾಗಭೂಷಣ ರೆಡ್ಡಿ ಮಾತನಾಡಿ, ದೇವರು ನನ್ನ ವ್ಯಾಪಾರ ಮತ್ತು ನನ್ನ ಕುಟುಂಬವನ್ನು ಆಶೀರ್ವದಿಸಿದ್ದಾನೆ. ನಾನು ಬದುಕಿರುವವರೆಗೆ ಪ್ರತಿದಿನ ರಾಮಮಂದಿರಕ್ಕಾಗಿ 1 ಕೆಜಿ ಲಡ್ಡು ತಯಾರಿಸುತ್ತೇನೆ ಎಂದು ವಾಗ್ದಾನ ಮಾಡಿದ್ದೇನೆ. ಅಯೋಧ್ಯೆಗೆ ಆಹಾರ ಪ್ರಮಾಣ ಪತ್ರವನ್ನೂ ತಂದಿದ್ದೇನೆ. ಈ ಲಡ್ಡುಗಳು ಒಂದು ತಿಂಗಳು ಬಾಳಿಕೆ ಬರುತ್ತವೆ. 25 ಮಂದಿ 3 ದಿನಗಳವರೆಗೆ ಲಡ್ಡುಗಳನ್ನು ತಯಾರಿಸಿದ್ದಾರೆ ಎಂದು ತಿಳಿಸಿದ್ದಾರೆ.