ಗದಗ: ಪ್ರದೇಶದ ಪರಿಚಿತತೆಗಾಗಿ ಭದ್ರಾವತಿಯ 97 RAF ಬಟಾಲಿಯನ್ ಗದಗ ಜಿಲ್ಲೆಗೆ ಆಗಮಿಸಿದೆ.
ಒಟ್ಟು 80 ಜನ RAF ಯೋಧರನ್ನ ಒಳಗೊಂಡ ತಂಡವು ಜನೆವರಿ 19 ರಿಂದ 25 ರ ವರೆಗೆ ಗದಗ ನಗರ ಸೇರಿದಂತೆ ಗದಗ ಜಿಲ್ಲೆಯ ವಿವಿಧ ತಾಲೂಕಾ ಕೇಂದ್ರ ಹಾಗೂ ಕೆಲವು ಪಟ್ಟಣಗಳಲ್ಲಿ ಏರಿಯಾ ಫ್ಯಾಮಿಲಿಯರೈಜೇಶನ್ ನಡೆಸಲಿದೆ. ಜಿಲ್ಲೆಯ ಮಾಹಿತಿ ಪಡೆಯುವಿಕೆ, ಪ್ರದೇಶದ ಪರಿಚಿತತೆಗಾಗಿ, ಸ್ಥಳ ಹಾಗೂ ಇಲ್ಲಿನ ವಾತಾವರಣ, ಸಂಸ್ಕೃತಿಯ ಬಗ್ಗೆ ಮಾಹಿತಿ ಪಡೆಯಲು ಈ ತಂಡವು ಆಗಮಿಸಿದೆ.
ಜಿಲ್ಲೆಯ ಪ್ರಮುಖ ನಗರ ಹಾಗೂ ಶಹರ ವ್ಯಾಪ್ತಿಯಲ್ಲಿ ಪಥ ಸಂಚಲನ ಜರುಗಿಸಲಾಗುತ್ತಿದೆ. ಆರ್.ಎ.ಎಫ್ ತಂಡಕ್ಕೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಾವು ನಿರ್ವಹಿಸುವ ಸ್ಥಳ ಅಪರಿಚಿತ ಆಗಬಾರದು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಎರ್ಪಡಿಸಲಾಗಿದೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಸುದ್ದಿಗೋಷ್ಠಿ ನಡೆಸಿ ಮಾಹಿತಿಯನ್ನ ನೀಡಿದ್ರು. ಅದೇ ನಿಮಿತ್ಯವಾಗಿ ಗದಗ ನಗರದ ಪ್ರಮುಖ ರಸ್ತೆಗಳಲ್ಲಿ RAF ತಂಡದಿಂದ ರೂಟ್ ಮಾರ್ಚ ಮಾಡಲಾಯಿತು.
ಈ ಸಂದರ್ಭದಲ್ಲಿ ಅಸಿಸ್ಟಂಟ್ ಕಮಾಂಡಂಟ್ ಬಿ.ಸಿ.ರಾಯ್, ಡಿ.ಎಸ್.ಪಿ. ವಿದ್ಯಾನಂದ ನಾಯಕ, ಸಿ.ಪಿ.ಐ. ಡಿ.ಬಿ.ಪಾಟೀಲ ಉಪಸ್ಥಿತರಿದ್ದರು.