ದಾವಣಗೆರೆ:-ಟೆಂಟ್ ನಲ್ಲಿ ಗೊಂಬೆ ಇಟ್ಟಿದ್ದರು ಎಂಬ ಸಚಿವ ಕೆ ಎನ್ ರಾಜಣ್ಣ ಹೇಳಿಕೆಗೆ ಮಾಜಿ ಸಚಿವ ರೇಣುಕಾಚಾರ್ಯ ಗರಂ ಆಗಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಒಬ್ಬ ಸಚಿವರಾಗಿ ಇಂತಹ ಹೇಳಿಕೆ ಸರಿಯಲ್ಲ. ಖಂಡಿತವಾಗಿ ಶ್ರೀರಾಮನ ಶಾಪ ತಟ್ಟತ್ತೆ. ಅಲ್ಲಿ ಶ್ರೀರಾಮನ ದೇವಸ್ಥಾನವಿತ್ತು ಅಂತ ಪುರಾತತ್ವ ಇಲಾಖೆಯೇ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಆಮೇಲೆಯೇ ಸುಪ್ರೀಂ ಕೋರ್ಟ್ ನಿರ್ಣಯ ಮಾಡಿದೆ. ಆದ್ರೂ ನೀವು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಯಾರನ್ನೋ ಒಲೈಸಲು ಇಂತಹ ಹೇಳಿಕೆಗಳು ಸರಿಯಲ್ಲ ಎಂದರು.
ಶ್ರೀರಾಮನ ಬಗ್ಗೆ ಹಗುರವಾಗಿ ಮಾತಾಡುವ ಸಚಿವರನ್ನ ವಜಾ ಮಾಡಿ. ಕೆ ಎನ್ ರಾಜಣ್ಣ ಇರಲಿ ಬೇರೆ ನ ಯಾರೇ ಇರಲಿ ವಜಾ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಮನ ಫ್ಲೆಕ್ಸ್ ಹಾಕಲು ಅನುಮತಿ ನಿರಾಕರಣೆ ವಿಚಾರವಾಗಿ ಮಾತನಾಡಿ, ಫ್ಲಕ್ಸ್ ಹಾಕೋಕೆ ಯಾರ ಅನುಮತಿ ಬೇಕಾಗಿದೆ. ಇದು ಯಾರ ಅಪ್ಪಂದು ಅಲ್ಲ, ಭಾರತ ದೇಶ. ಹಿಂದೆ ಬಾಬರ್ ಫ್ಲಕ್ಸ್ ಹಾಕೋಕೆ ಅನುಮತಿ ಕೊಟ್ಟಿದ್ದರಾ?. ಹಿಂದುಗಳೆಲ್ಲ ಜ.22 ರಂದು ಶ್ರೀರಾಮನ ಪೂಜೆ ಮಾಡಬೇಕು. ಪೂಜೆ ಮಾಡಿ ತಟ್ಟೆಯಲ್ಲಿ ದೀಪಗಳನ್ನ ಹಚ್ಚಿ ಬೆಳಗಬೇಕು ಎಂದರು.