ರಾಯಚೂರು : ದರೋಡೆ, ಮನೆ, ವಾಹನಗಳು, ಚಿನ್ನಾಭರಣ ಕಳ್ಳತನ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳನ್ನು ಬೇಧಿಸಿದ ರಾಯಚೂರು ಪೊಲೀಸರು 1 ಕೋಟಿ 79 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ, ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
ಜಿಲ್ಲೆಯಾದ್ಯಂತ ಜನವರಿ 1 ರಿಂದ ಡಿಸೆಂಬರ್ 31 2023 ಅವಧಿಯಲ್ಲಿ ಗಾಂಜಾ ಬೆಳೆಯುವ, ಅಕ್ರಮ ಸಾಗಾಣಿಕೆ ಮಾಡುವ ಅಡ್ಡೆಗಳ ಮೇಲೆ ದಾಳಿ ಮಾಡಿದೆ 14 ಪ್ರಕರಣಗಳು, ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟದ ಮೂರು ಪ್ರಕರಣಗಳು. ಮೊಬೈಲ್ಗಳ ಕಳ್ಳತನ ಪ್ರಕರಣಗಳಿಗೆ ಸಿಇಐಆರ್ ಪೋರ್ಟ್ನಲ್ಲಿ ನೊಂದಾಯಿಸಿದ ಒಟ್ಟು 772 ಪ್ರಕರಣಗಳು. ಮಹಿಳೆ ಮತ್ತು ಮಕ್ಕಳ ಕಾಣೆ ಸೇರಿದಂತೆ ಒಟ್ಟು 223 ಪ್ರಕರಣಗಳು, 2023 ನೇ ಸಾಲಿನಲ್ಲಿ 267 ರಸ್ತೆ ಅಪಘಾತ ಪ್ರಕರಣಗಳು ದಾಖಲಾದ ಪ್ರಕರಣಗಳು ಸೇರಿ ವಿವಿಧ ಪ್ರಕರಣಗಳನ್ನು ಭೇದಿಸಿಲಾಗಿದೆ.
ಲಾರಿ, ಕಾರು, ದ್ವಿಚಕ್ರ ವಾಹನ, ಬಂಗಾರ ಸೇರಿ ಹಲವು ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದ್ದು. ಈ ವೇಳೆ ಆರೋಪಿತರಿಂದ ವಶಪಡಿಸಿಕೊಂಡ ಎಲ್ಲಾ ವಸ್ತುಗಳನ್ನ ಮಾಲೀಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ಹಸ್ತಾಂತರಿಸಿದರು.