ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿ. ಕೆ ಹರಿಪ್ರಸಾದ್ ನಡುವಿನ ಕೋಲ್ಡ್ ವಾರ್ ಬೀದಿಗೆ ಬಂದಂತೆ ಕಾಣ್ತಿದೆ. ಗೋಧ್ರಾ ರೀತಿಯ ಘಟನೆ ಸಂಭವಿಸುವ ಸಾಧ್ಯತೆ ಇದೆ ಎಂದಿದ್ದ ಹರಿಪ್ರಸಾದ್ ವಿರುದ್ಧ, ತಮ್ಮದೇ ಸರ್ಕಾರ ಸಿಸಿಬಿ ಅಸ್ತ್ರ ಬಿಟ್ಟಿದೆ.ಇದು ಆರ್ ಎಸ್ ಎಸ್ ಸರ್ಕಾರ ಎಂದು ಬಿ.ಕೆ ಹರಿಪ್ರಸಾದ್, ತಮ್ಮ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ.ಯೆಸ್.. ಶೋ ಮ್ಯಾನ್ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದ ಬಿ.ಕೆ ಹರಿಪ್ರಸಾದ್ ಗೆ ಸಿಸಿಬಿ ಕಂಟಕ ಎದುರಾಗಿದೆ..
ರಾಮಮಂದಿರ ವಿಚಾರವಾಗಿ ಮಾತನಾಡೋ ಸಂದರ್ಭದಲ್ಲಿ, ಕರ್ನಾಟಕದಲ್ಲೂ ಗೋಧ್ರಾ ಮಾದರಿಯ ಘಟನೆ ನಡೆಯಬಹುದು. ಕೆಲವರು ಸಂಚು ರೂಪಿಸುತ್ತಿದ್ದಾರೆ ಎಂದು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ರು. ಹರಿಪ್ರಸಾದ್ ಹೇಳಿಕೆ ಬಗ್ಗೆ ಎನ್ಕೈರಿ ಮಾಡಲು, ಸಿಸಿಬಿ ಎಂಟ್ರಿ ಕೊಟ್ಟಿದೆ..
How to Peel Ginger: ಸಿಂಪಲ್ ಟ್ರಿಕ್ಸ್ ಮೂಲಕ ಶುಂಠಿ ಸಿಪ್ಪೆ ಫಟಾಫಟ್ ಆಗಿ ಸುಲಿಯಬಹುದು..!
ಕೆಕೆ ಗೆಸ್ಟ್ ಹೌಸ್ ನಲ್ಲಿದ್ದ ಬಿ.ಕೆ ಹರಿಪ್ರಸಾದ್ ಅವ್ರನ್ನ ಇಂದು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ, ನೋಟೀಸ್ ಕೂಡ ನೀಡಿದ್ದಾರೆ.. ಇದ್ರಿಂದ ಕೆಂಡಾಮಂಡಲ ಆಗಿರೋ ಬಿ.ಕೆ ಹರಿಪ್ರಸಾದ್ ಇದು ಕಾಂಗ್ರೆಸ್ ಸರ್ಕಾರವೋ.. ಆರ್ ಎಸ್ ಎಸ್ ಸರ್ಕಾರವೋ..? ನನ್ನ ಪರಿಸ್ಥಿತಿಯೇ ಹೀಗಾದಲೆ ಕಾಂಗ್ರೆಸ್ ಕಾರ್ಯಕರ್ತರ ಪರಿಸ್ಥಿರಿ ಏನು ಅಂತಾ ಗುಡುಗಿದ್ದಾರೆ..
ತಮ್ಮ ಹೇಳಿಕೆ ವಿರುದ್ಧ ಸಿಸಿಬಿ ತನಿಖೆಗೆ ಆದೇಶಿಸಿರೋದಕ್ಕೆ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಬಿ ಕೆ ಹರಿಪ್ರಸಾದ್ ಮಲ್ಲಯುದ್ಧಕ್ಕಿಳಿದಿದ್ದಾರೆ.. ನಾನು ಯಾವ ಸರ್ಕಾರದಲ್ಲಿದ್ದೇನೆ ಎಂದು ಅರ್ಥವಾಗುತ್ತಿಲ್ಲ.. ಬೇಕಿದ್ದರೆ ನನ್ನನ್ನ ಅರೆಸ್ಟ್ ಮಾಡಿ.. ಮಂಪರು ಪರೀಕ್ಷೆಗೆ ಒಳಪಡಿಸಿ.. ಕಲ್ಲಡ್ಕ ಪ್ರಭಾಕರ್ ಭಟ್, ಅನಂತ್ ಕುಮಾರ್ ಹೇಳಿಕೆಗಳ ಬಗ್ಗೆ ಕ್ರಮ ಆಗಿಲ್ಲ..
ರಾಮ ಮಂದಿರಕ್ಕೆ ಹೋಗುವವರಿಗೆ ಭದ್ರತೆ ನೀಡಬೇಕು. ನನ್ನ ಹೇಳಿಕೆಗೆ ಈಗಲೂ ಬದ್ಧ ಅಂತಾ ಸ್ವಪಕ್ಷದೊಳಗಿನ ಶತ್ರುಗಳಿಗೆ ಎಚ್ಚರಿಕೆ ನೀಡಿದ್ರು.. ಒಟ್ಟಾರೆ,ತಮ್ಮ ಪಕ್ಷದ ಹಿರಿಯ ನಾಯಕನ ವಿರುದ್ಧವೇ ಕಾಂಗ್ರೆಸ್ ಸರ್ಕಾರ ಸಿಸಿಬಿ ಅಸ್ತ್ರ ಬಿಟ್ಟಿದ್ದು,ಇದು ಮುಂದೆ ಯಾವ ಸ್ವರೂಪ ಪಡೆಯಲಿದೆ ಅನ್ನೋದನ್ನ ಕಾದು ನೋಡಬೇಕಿದೆ.