ಬೆಂಗಳೂರಿನ ಜ 19: ಸಮಾಜಕ್ಕೆ ಆದಿ ಚುಂಚನಗಿರಿ ಮಠದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಯವರ ಬಹುಮುಖ ಕೊಡುಗೆ ಅಪಾರ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಟೌನ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿರವರ 79 ನೇ ಜಯಂತ್ಯೋತ್ಸವ ಮತ್ತು ಕರ್ನಾಟಕ ರಾಜ್ಯ ಒಕ್ಕಲಿಗರ ಡೈರಕ್ಟರಿ ಟ್ರಸ್ಟ್ ಬೆಳ್ಳಿಹಬ್ಬ ಸಾಮರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಡಿನ ಕಲೆ, ಸಂಸ್ಕೃತಿ, ಶಿಕ್ಷಣದ ಉಳಿವು, ಪ್ರಗತಿಗೆ ಸಾಮಾಜಿಕ ಸಾಮರಸ್ಯದ ಸಮೃದ್ಧಿಗೆ ಆದಿ ಚುಂಚನಗಿರಿ ಮಠದ ಪಾತ್ರ ಅಪಾರ ಎಂದು ಅವರು ಹೇಳಿದರು. ಶ್ರೀಮಠದ ದಾಸೋಹ ಪರಂಪರೆ ವಿಶ್ವದಲ್ಲೇ ದೊಡ್ಡ ಖ್ಯಾತಿ ಪಡೆದಿದೆ. ಶಿಕ್ಷಣ, ಅನ್ನದಾಸೋಹ ಹಾಗೂ ಆರೋಗ್ಯ ಸೇವೆಯ ಮೂಲಕ ಶ್ರೀಸಾಮಾನ್ಯರ ಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿಚುಂಚನಗಿರಿ ಕೇವಲ ಒಂದು ಸಮುದಾಯದ ಮಠವಾಗಿಲ್ಲ. ಎಲ್ಲಾ ಸಮುದಾಯದ ಮಠವಾಗಿದೆ. ಎಲ್ಲಾ ವರ್ಗದ ದೀನ ದಲಿತರು, ಬಡವರ ಪಾಲಿನ ಆಸರೆಯಾಗಿ ಎಮಕ್ಕಳ ಶಿಕ್ಷಣ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ದಾರಿ ದೀಪವಾಗಿದೆ. ಶ್ತೀ.ಶ್ರೀ.ಶ್ರೀ ಡಾ ಬಾಲಗಂಗಾಧರ ನಾಥ ಸ್ವಾಮೀಜಿ ಉತ್ತಮ ಬುನಾದಿ ಹಾಕಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.
ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಗದ ಬೆಳಕು,
ಅವರ ಜೀವನಾದರ್ಶಗಳು ದಾರಿದೀಪ, ಅವರ 79ನೇ ಜಯಂತೋತ್ಸವ ಹಾಗೂ 11ನೇ ವರ್ಷದ ಸಂಸ್ಮರಣಾ ಮಹೋತ್ಸವವನ್ನು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಸ್ವಾಮೀಜಿರವರ ನೇತೃತ್ವದಲ್ಲಿ ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸಲಾಗಿದೆ ಎಂದು ಸಚಿವರು ತಿಳಿಸಿದರು. ಪದ್ಮಭೂಷಣ ಡಾ||ಬಾಲಗಂಗಾಧರನಾಥ ಸ್ವಾಮೀಜಿರವರು ಕೈಗೊಂಡ ಸಾಮಾಜಿಕ,
ಶೈಕ್ಷಣಿಕ, ಪ್ರಾಕೃತಿಕ ಸಮುದಾಯ ಅಭಿವೃದ್ಧಿ ಕಾರ್ಯಗಳು ಎಂದೆಂದಿಗೂ ಮಾದರಿಯಾಗಿಯೇ ಉಳಿಯು ತ್ತವೆ. ಶ್ರೀಗಳ ಸಾಮಾಜಿಕ ಕಳಕಳಿ ಅನನ್ಯ ಅವರ 39 ವರ್ಷಗಳ ಸೇವಾ ಅವಧಿಯಲ್ಲಿ ಆದಿಚುಂಚನಗಿರಿ ಮಠ ಹೆಚ್ಚಿನ ಉಚ್ರಾಯ ಸ್ಥಿತಿ ತಲುಪಿತು. ದೇಶ ವಿದೇಶಗಳಲ್ಲಿ ಶ್ರೀಮಠದ ಭಕ್ತರು ಹೆಚ್ಚಿ ಶಾಖೆಗಳನ್ನು ತೆರೆಯಲಾಯಿತು ಎಂದರು . ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ನೂರು ವರ್ಷಗಳ ಕಾಲ ಬದುಕಿದ್ದರೆ ಏನು ಮಾಡಬಹುದೋ ಅದನ್ನು ಮಾಡಿದ್ದಾರೆ ಎಂದರು.
1974ರಲ್ಲಿ ಶ್ರೀಮಠದ 71ನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿರವರು ಇಡೀ ಜಗತ್ತು ಮೆಚ್ಚುವಂತೆ ಹಲವಾರು ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಯೋಜನೆಗಳನ್ನು ರೂಪಿಸಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಜಗದ ಬೆಳಕಾಗಿದ್ದಾರೆ ಎಂದು ಕೃಷಿ ಸಚಿವರು ಬಣ್ಣಿಸಿದರು.ಇದೇ ರೀತಿ ಕರ್ನಾಟಕ ರಾಜ್ಯ ಒಕ್ಕಲಿಗರ ಡೈರಕ್ಟರಿ ಟ್ರಸ್ಟ್ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಚಾರ.
ಸಂಘ ಸಮುದಾಯದ ಶ್ರೇಯೋಭಿವೃದ್ಧಿಗೆ ಸಲ್ಲಿಸುತ್ತಿರುವ ಸೇವೆ ಅನನ್ಯ ಈ ಸಂದರ್ಭದಲ್ಲಿ ತಾವು ಕರ್ನಾಟಕ ರಾಜ್ಯ ಒಕ್ಕಲಿಗರ ಡೈರಕ್ಟರಿ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳನ್ನು ಅಭಿನಂಧಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ,
ತುಮಕೂರು ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಶಾಸಕರಾದ ಕೃಷ್ಣಪ್ಪ ತಮಿಳುನಾಡು ಶಾಸಕರಾದ ಪ್ರಕಾಶ್,ವಿಧಾನ ಪರಿಷತ್ ಸದಸ್ಯರಾದ ರಮೇಶ್ ಗೌಡ ಹಾಗೂ ವಿವಿಧ ಪ್ರಮುಖರು ಹಾಜರಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.