ಹುಬ್ಬಳ್ಳಿ: ವಾಣಿಜ್ಯ ಚಟುವಟಿಕೆಗಳಿಂದ ವಾಣಿಜ್ಯನಗರಿ ಎಂದು ಖ್ಯಾತಿ ಪಡೆದಿರುವ ಹುಬ್ಬಳ್ಳಿ ಈಗ ಅಯೋಧ್ಯೆಯಂತೆ ಕಂಗೊಳಿಸುತ್ತಿದೆ. ಎಲ್ಲೆಡೆಯೂ ಕೇಸರಿ ತೋರಣ ಹಾಗೂ ರಾಮನ ಮೆರವಣಿಗೆ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಆಚರಣೆ ನಡೆಸಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬುವಂತೇ ಹುಬ್ಬಳ್ಳಿಯ ಗೋಪನಕೊಪ್ಪದ ಮೆರವಣಿಗೆಯಲ್ಲಿ ವಿಶೇಷ ಆಚರಣೆ ನಡೆಸಲಾಗುತ್ತಿದೆ.
ಹೌದು..ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಗೋಪನಕೊಪ್ಪದ ರಾಮಭಕ್ತರಿಂದ ರಾಮನ ಹಾಗೂ ಹನುಮಾನ್ ಮೂರ್ತಿಯ ಭವ್ಯ ಮೆರವಣಿಗೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು.
ಟ್ರ್ಯಾಕ್ಟರ್ ನಲ್ಲಿ ಶ್ರೀರಾಮನ ಹಾಗೂ ಹನುಮಾನ್ ಮೂರ್ತಿಗಳನ್ನಿಟ್ಟು ವಿನೂತನ ರೀತಿಯಲ್ಲಿ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ಗೌರವ ಸಮರ್ಪಣೆ ಮಾಡಲಾಗಿದೆ.