ರಣ್ಬೀರ್ ಕಪೂರ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ (Animal) ಸಿನಿಮಾ 800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಅವರ ಸಿನಿಮಾ ಮೇಲಿನ ಪ್ರೀತಿಗೆ ರಶ್ಮಿಕಾ ಹಾಡಿಹೊಗಳಿದ್ದಾರೆ
ಬಾಲಿವುಡ್ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಲು ಕಾರಣವಾದ ‘ಅನಿಮಲ್’ ಸಿನಿಮಾ ಮತ್ತು ಡೈರೆಕ್ಟರ್ ಕುರಿತು ರಶ್ಮಿಕಾ ರಿಯಾಕ್ಟ್ ಮಾಡಿದ್ದಾರೆ. ಸಂದೀಪ್ ಅವರು (Sandeep Reddy Vanga) ಸಿನಿಮಾ ಮಾಡುವಾಗ ಭಿನ್ನವಾಗಿ ಯೋಚಿಸುತ್ತಾರೆ. ಆದರೆ ‘ಅನಿಮಲ್’ ಚಿತ್ರ ನೋಡಿದಾಗ ಈ ರೀತಿಯ ಸಿನಿಮಾ ಬೇಕು ಎನ್ನುವಂತೆ ಮಾಡಿದ್ದರು.
ಈ ವೇಳೆ, ಅನಿಮಲ್ ಪಾರ್ಟ್ 2 ಬಗ್ಗೆ ನಟಿ ಮಾತನಾಡಿದ್ದರು. ‘ಅನಿಮಲ್ ಪಾರ್ಕ್’ ಚಿತ್ರದ ಕಥೆ ಹೇಗೆ ಬೇಕಾದರೂ ಇರಬಹುದು. ಈಗಾಗಲೇ ಚಿತ್ರದ ಸಣ್ಣ ಎಳೆಯನ್ನು ಸಂದೀಪ್ ಹೇಳಿದ್ದಾರೆ ಎಂದು ರಶ್ಮಿಕಾ ಮಾತನಾಡಿದ್ದಾರೆ. ‘ಅನಿಮಲ್’ ಪಾರ್ಟ್ 2 ಸಕ್ಸಸ್ ಕಾಣುವ ಭರವಸೆಯಲ್ಲಿದ್ದಾರೆ.