ಬಂಟ್ವಾಳ:- ಅಯೋಧ್ಯೆ ಶ್ರೀರಾಮ ಮಂದಿರ ದೇಶದ ಹೆಮ್ಮೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಕೊಯಿಲ ಹನುಮಾನ್ ನಗರದಲ್ಲಿ ರಾಯಿ-ಕೊಯಿಲ ವಿವೇಕಾನಂದ ಚಾರಿಟೇಬಲ್ ನೇತೃತ್ವ ಮತ್ತು ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಸಹಭಾಗಿತ್ವದಲ್ಲಿ ನಡೆದ ‘ಮಹಾಚಂಡಿಕಾಯಾಗ ಮತ್ತು ರಾಮತಾರಕ ಮಂತ್ರ ಹೋಮ’ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಹಲವಾರು ವರ್ಷಗಳಲ್ಲಿ ಲಕ್ಷಾಂತರ ಮಂದಿ ರಾಮಭಕ್ತರ ಹೋರಾಟದಿಂದ ಪುನರ್ ನಿರ್ಮಾಣಗೊಂಡ ಅಯೋಧ್ಯೆ ಶ್ರೀರಾಮ ಮಂದಿರ ದೇಶದ ಸಮಸ್ತ ಹಿಂದೂ ಸಮಾಜದ ಹೆಮ್ಮೆಯ ಪ್ರತೀಕವಾಗಿದೆ. ದೇಶದ ಸಮಸ್ತ ನಾಗರಿಕರ ಪ್ರತಿನಿಧಿಯಾಗಿ ಜಗತ್ತು ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರು ವೃತಾಚರಣೆ ಕೈಗೊಂಡು ಮಂದಿರ ಲೋಕಾರ್ಪಣೆಗೆ ಸನ್ನದ್ಧರಾಗಿದ್ದಾರೆ ಎಂದರು.