ಬೆಂಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪೊಲೀಸ್ ಬಂದೋಬಸ್ತ್ ಫುಲ್ ಸ್ಟ್ರೀಕ್ಟ್ ಆಗಿದ್ದು ಈಗಾಗಲೇ ಪೊಲೀಸ್ ಸಿಬ್ಬಂದಿಗಳಿಗೆ ರೂಲ್ಸ್ ಫಾಲೋ ಮಾಡಲು ಕಡ್ಡಾಯಗೊಳಿಸಲಾಗಿದೆ.
22 ನೇ ತಾರೀಖು ಯಾವುದೇ ಸಿಬ್ಬಂದಿಗೂ ಇಲ್ಲ ರಜೆ, ರಜೆ ಮೇಲೆ ಇರುವವರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲೇ ಬೇಕು ಎಂದು ಸೂಚನೆಗಳನ್ನ ನೀಡಲಾಗಿದೆ.
ಈ ಹಿಂದಿನ ಕೋಮು ಗಲಭೆಗೆ ಗಳ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಹಾಗಾಗಿ ಈ ಹಿಂದೆ ಕೋಮು ಗಲಭೆಗಳಲ್ಲಿ ಭಾಗಿಯಾದವರ ಮೇಲೆ ಪೊಲೀಸರ ಕಣ್ಣು. ಅಂತವರನ್ನ ಕೂಡ ಕರೆದು ವಾರ್ನ್ ಮಾಡಿರುವ ಪೊಲೀಸರು
ಅವರ ಹಿನ್ನೆಲೆ ಹಾಗೂ ಪ್ರಸ್ತುತ ಆತ ಮಾಡುತ್ತಿರುವ ಕೆಲಸದ ಮೇಲೆ ವಶಕ್ಕೆ ಪಡೆಯುವ ಬಗ್ಗೆ ಚಿಂತನೆ ಆಯಾ ಏರಿಯಾ ರೌಡಿ ಶೀಟರ್ ಗಳ ಮೇಲೂ ಪೊಲೀಸರ ಹದ್ದಿನ ಕಣ್ಣುಎಲ್ಲಾ ಠಾಣ ವ್ಯಾಪ್ತಿಯಲ್ಲೂ ಶಾಂತಿ ಪಾಲನ ಸಭೆಯನ್ನ ನಡೆಸಲು ಸೂಚನೆ ನೀಡಲಾಗಿದೆ.
ಇನ್ಸ್ಪೆಕ್ಟರ್ ಗಳ ನೇತೃತ್ವದಲ್ಲಿ ನಡೆಯಲಿರುವ ಶಾಂತಿ ಪಾಲನಾ ಸಭೆ ಎಲ್ಲಾ ಧರ್ಮದ ಮುಖಂಡರನ್ನ ಕೂಡ ಕರೆಸಿ ಶಾಂತಿ ಪಾಲನ ಸಭೆ ಧರ್ಮದ ಮುಖಂಡರಿಗೂ ಕೂಡ ಮನವಿ ಮಾಡಲಿರುವ ಪೊಲೀಸರು ಹಾಗೆ ತಮ್ಮ ಸಮುದಾಯದವರಿಗೂ ಕೂಡ ಈ ಬಗ್ಗೆ ತಿಳಿಸುವಂತೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲೂ ರಾಮ ಮಂದಿರ ಉದ್ಘಾಟನೆಯ ದಿನ ರ್ಯಾಲಿಗಳಿಗೆ ಅವಕಾಶ ನೀಡಿಲ್ಲ ಹಾಗೆ ಆ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ನಿಡಿದ್ದು ಬೇರೆ ಜಿಲ್ಲೆಗಳಿಂದಲೂ ಭದ್ರತೆಗಾಗಿ ಪೊಲೀಸರನ್ನ ಕರೆಸಿ ನಿಯೋಜನೆ ಮಾಡಲಾಗಿದೆ.