ಮೈಸೂರು:- ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿರೋದು ಸೌಭಾಗ್ಯ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
500 ವರ್ಷಗಳ ನಂತರ ರಾಮಮಂದಿರ ನಿರ್ಮಾಣವಾಗಿ ಜನವರಿ 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠೆ ಆಗುತ್ತಿರುವುದು ಇಡೀ ನಾಡಿಗೆ ಸಂತಸ ಮತ್ತು ಸಂಭ್ರಮದ ವಿಷಯವಾಗಿದೆ, ಇದು ನಿಜಕ್ಕೂ ಎಲ್ಲ ಭಾರತೀಯರಿಗೆ ಐತಿಹಾಸಿಕ ಕ್ಷಣ ಎಂದರು. ಪ್ರತಿಷ್ಠಾಪನೆಗೆ ಮೈಸೂರಿನವರೇ ಆಗಿರುವ ಅರುಣ್ ಯೋಗಿರಾಜ್ ಕೆತ್ತಿರುವ ಬಾಲ ರಾಮನ ಮೂರ್ತಿ ಆಯ್ಕೆಯಾಗಿರೋದು ಹೆಮ್ಮೆಯ ವಿಷಯ. ಇನ್ನೂ ಬೇರೆ ಬೇರೆ ವಿಗ್ರಹಗಳನ್ನು ಕೆತ್ತಿ ನಾಡಿನಾದ್ಯಂತ ಖ್ಯಾತಿ ಗಳಿಸಿರುವ ಅರುಣ್ ಅವರಿಗೆ ಅಭಿನಂದನೆ ಮತ್ತು ಶುಭಾಶಯಗಳು ಎಂದು ಯದುವೀರ್ ಹೇಳಿದರು.