ಬೆಂಗಳೂರು: ಪ್ರವಾಸಿ ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದ ಮುನ್ನಡೆ ಗಳಿಸಿದೆ. ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ ಮೂರನೇ ದಿನ 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.
ಇನ್ನು 25 ರನ್ಗಳ ಹಿನ್ನಡೆಯಲ್ಲಿತ್ತು. ಮೂರನೇ ದಿನ ತಂಡ 9 ವಿಕೆಟ್ ನಷ್ಟದಲ್ಲಿ 94 ರನ್ ಗಳಿಸಿದ್ದಾಗಲೂ ಇನಿಂಗ್ಸ್ ಸೋಲಿನ ಸಂಕಷ್ಟದಲ್ಲೇ ಉಳಿದಿತ್ತು. ಆದರೆ, ಕೆಮಾರ್ ರೋಚ್ ಮತ್ತು ಶಾಮ್ರ ಜೋಸೆಫ್ ಕೊನೇ ವಿಕೆಟ್ಗೆ 26 ರನ್ ಜೋಡಿಸಿ ವಿಂಡೀಸ್ಗೆ ಅಲ್ಪ ಮುನ್ನಡೆ ತಂದುಕೊಟ್ಟರು. ಬಳಿಕ ಗೆಲುವಿಗೆ 26 ರನ್ ಗುರಿ ಪಡೆದ ಆಸ್ಟ್ರೇಲಿಯಾ 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಆದರೆ, ಶಾಮ್ರ ಜೋಸೆಫ್ ಎಸೆದ ಬೌನ್ಸರ್ನಲ್ಲಿ ಆಸೀಸ್ ಓಪನರ್ ಉಸ್ಮಾನ್ ಖವಾಜ ತಲೆಗೆ ಪೆಟ್ಟುತಿಂದು ರಿಟೈರ್ ಹರ್ಟ್ ಆದರು.
ಆಸ್ಟ್ರೇಲಿಯಾ ಪರ ಎರಡನೇ ಇನಿಂಗ್ಸ್ನಲ್ಲಿ ವೇಗದ ಬೌಲರ್ ಜಾಶ್ ಹೇಝಲ್ವುಡ್ ಐದು ವಿಕೆಟ್ ಪಡೆದು ಅಬ್ಬರಿಸಿದರು. ಮೊದಲ ಇನಿಂಗ್ಸ್ನಲ್ಲೂ ಜಾಶ್ 4 ವಿಕೆಟ್ ಸಂಪಾದಿಸಿದ್ದರು. ಎರಡನೇ ಇನಿಂಗ್ಸ್ನಲ್ಲಿ ಅವರಿಗೆ ತಲಾ ಎರಡು ವಿಕೆಟ್ ಪಡೆದ ನೇಥನ್ ಲಯಾನ್ ಮತ್ತು ಮಿಚೆಲ್ ಸ್ಟಾರ್ಕ್ ಅವರಿಂದ ಉತ್ತಮ ಸಾಥ್ ಲಭ್ಯವಾಯಿತು. ಪರಿಣಾಮ 35.2 ಓವರ್ಗಳಲ್ಲಿ ವೆಸ್ಟ್ ಇಂಡೀಸ್ 120 ರನ್ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಆಯಿತು. 17000 ಮಂದಿ ಪ್ರೇಕ್ಷಕರ ಎದುರು 26 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 6.4 ಓವರ್ಗಳಲ್ಲಿ ಗೆಲುವಿನ ಕೇಕೆ ಹಾಕಿತು.