ಬಿಗ್ ಬಾಸ್ ಮನೆಯಲ್ಲಿ (Bigg Boss House) ಸ್ನೇಹಿತ್ (Snehith) ಎಲಿಮಿನೇಷನ್ ನಂತರ ಕಾರ್ತಿಕ್ ಜೊತೆ ನಮ್ರತಾ ಒಡನಾಟ ಹೊಂದಿದ್ದರು. ಇದೀಗ ಬಿಗ್ ಮನೆಯ ಮಾಜಿ ಸ್ಪರ್ಧಿಗಳು ಮನೆಗೆ ಬಂದ ಬೆನ್ನಲ್ಲೇ ನಮ್ರತಾಗೆ ಆಗಿರೋ ಕೆಟ್ಟ ಟ್ರೋಲ್ ಬಗ್ಗೆ ತಿಳಿದಿದೆ. ಈ ಬಗ್ಗೆ ಸ್ನೇಹಿತ್ ಮುಂದೆ ನಮ್ರತಾ (Namratha Gowda) ಕಣ್ಣೀರು ಸುರಿಸಿದ್ದಾರೆ. ಕಾರ್ತಿಕ್ಗೆ ಹುಡುಗಿ ಇದ್ದಾಳೆ, ಗೊತ್ತಿದ್ರೂ ಬೀಳಲು ನಾನು ಬಕ್ರನಾ ಎಂದು ಕೇಳಿದ್ದಾರೆ.
ಕಾರ್ತಿಕ್ (Karthik Mahesh) ಹಾಗೂ ನಮ್ರತಾ (Namratha) ತಮಾಷೆಗೆ ಫ್ಲರ್ಟ್ ಮಾಡುತ್ತಿರುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ (Troll) ಆಗಿರುವುದನ್ನ ನಮ್ರತಾಗೆ ಸ್ನೇಹಿತ್ ತಿಳಿಸಿದ್ದಾರೆ. ಇದರಿಂದ ಬೇಸರಗೊಂಡ ನಮ್ರತಾ ಕಣ್ಣೀರು ಸುರಿಸಿದ್ದಾರೆ. ನನಗೆ ಇಲ್ಲಿರೋಕೆ ಇಷ್ಟವಿಲ್ಲ. ನನ್ನ ಕ್ಯಾರೆಕ್ಟರ್ನ ನಾನು ರಿಸ್ಕ್ ಮಾಡಿಕೊಳ್ಳಲ್ಲ. ಪ್ಲೀಸ್ ನನ್ನ ಮನೆಗೆ ಕರ್ಕೊಂಡು ಹೋಗಿ ಎಂದು ಸ್ನೇಹಿತ್ ಮುಂದೆ ನಮ್ರತಾ ಕಣ್ಣೀರಿಟ್ಟಿದ್ದಾರೆ.
ಬಿಗ್ ಬಾಸ್ಗೆ ಬಂದ ಕೂಡಲೆ ವಿನಯ್, ಸಂಗೀತಾ, ವರ್ತೂರು ಸಂತೋಷ್, ತುಕಾಲಿ ಸಂತು ಮುಂತಾದವರೊಂದಿಗೆಲ್ಲಾ ಸ್ನೇಹಿತ್ ಮಾತನಾಡಿದರು. ಆದರೆ, ಈ ಹಿಂದೆ ಇದ್ದಂತೆ ನಮ್ರತಾ ಜೊತೆಗೆ ಸ್ನೇಹಿತ್ ಆತ್ಮೀಯವಾಗಿ ನಡೆದುಕೊಳ್ಳಲಿಲ್ಲ. ಹೀಗಾಗಿ ನಮ್ರತಾ ಮಂಕಾಗಿದ್ದರು. ಇದನ್ನೇ ತನಿಷಾ ಪ್ರಶ್ನೆ ಮಾಡಿದರು. ಯಾಕೆ ನೀವು ಅವರೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ? ಪಾಪ ಅವರು ಕಾಯ್ತಿದ್ದಾರೆ. ಬೇಸರ ಮಾಡಿಕೊಂಡಿದ್ದಾರೆ ಎಂದು ತಿಳಿ ಹೇಳಿದ್ದರು.