ಯಾದಗಿರಿ:- ಅಯೋಧ್ಯೆಯ ಶ್ರೀರಾಮ ಮಂದಿರ ಬಗ್ಗೆ ಕಾಂಗ್ರೆಸ್ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಭಾರೀ ಚರ್ಚೆಗೆ ಹುಟ್ಟು ಹಾಕಿದೆ.
Vo. ರಾಮ ಮಂದಿರದಿಂದ ನಮಗ್ಯಾರಿಗು, ಬಡವರಿಗು ಹೊಟ್ಟೆ ತುಂಬುವುದಿಲ್ಲ ರಾಮ ಮಂದಿರದಿಂದ ಯಾರಿಗೇನು ಆಗಲ್ಲ ಎಂಬ ಹೇಳಿಕೆ ನೀಡಿ ಉದ್ಧಟತನ ತೋರಿದ್ದಾರೆ.
ಕಾಂಗ್ರೆಸ್ 75 ವರ್ಷದಿಂದ ಏನು ಮಾಡಿದೆ ಅಂತಾ ಕೇಳ್ತಾರೆ. ಕಾಂಗ್ರೆಸ್ ರಾಮ ಮಂದಿರ ಮಾಡಿಲ್ಲ. ಬಿಜೆಪಿ ರಾಮ ಮಂದಿರ ಮಾಡಿದ್ದಾರೆ ಅಂತಾರೆ. ನಾವು ಶಾಲೆ, ದವಾಖಾನೆ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಇರಿಗೇಷನ್ ಮಾಡೀವಿ ಅಂತಾ ಹೇಳಿವಿ. ಜನರಿಗೆ ಏನು ಬೇಕು ಅದು ಮಾಡೀವಿ. ಆದ್ರೆ ನಾವು ರಾಮ ಮಂದಿರವನ್ನು ವಿರೋಧ ಮಾಡಲ್ಲ ಎಂದು ದರ್ಶನಾಪುರ ಸಮಜಾಯಿಸಿ ನೀಡಿದ್ದಾರೆ.