ಮಂಡ್ಯ:- ವೈದ್ಯರ ಮನೆಯಲ್ಲಿ ಕಳ್ಳತನ ನಡೆದಿದ್ದು, ಅಪಾರ ಪ್ರಮಾಣದ ನಗದು-ಚಿನ್ನಾಭರಣ ಕಳವು ಆಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಕೆ.ಹೆಚ್.ನಗರದಲ್ಲಿ ಜರುಗಿದೆ. ಇನ್ನೂ ಕಳ್ಳತನ ಮಾಡಿದ ಪುಂಡರು ಬಳಿಕ ಸಿಸಿಟಿವಿ ಕ್ಯಾಮರಾದ ಪೋಟೋಜ್ ಜೊತೆ ಪರಾರಿಯಾಗಿದ್ದಾರೆ.
ತೈಲೂರು ಗ್ರಾಮದ ಡಾ.ಟಿ.ಚಂದ್ರ ಅವರ ಮನೆಯಲ್ಲಿ ರಾತ್ರೋರಾತ್ರಿ ಕಳ್ಳರು ಕೈ ಚಳಕ ತೋರಿದ್ದು, ಅಲ್ಲದೇ ಚಿನ್ನಾಭರಣದ ಜೊತೆಗೆ ಎಂಟು ಲಕ್ಷ ನಗದು ದೋಚಿ ಪರಾರಿ ಆಗಿದ್ದಾರೆ.
ಕದ್ದ ಮಾಲುಗಳ ಮೌಲ್ಯ ಸುಮಾರು 45 ಲಕ್ಷ ಇದ್ದು, ಮನೆಯಲ್ಲಿ ಯಾರು ಇಲ್ಲದಿದ್ದಾಗ ಹೊಂಚು ಹಾಕಿ ಕಳವು ಮಾಡಲಾಗಿದೆ. ಕಳ್ಳತನ ಮಾಡಿ ಜೊತೆಗೆ ಸಿಸಿಟಿವಿ ಕ್ಯಾಮರಾದ ಪೋಟೋಜ್ ಜೊತೆ ಖತರ್ನಾಕ್ ಗಳು ಎಸ್ಕೇಪ್ ಆಗಿದ್ದಾರೆ. ಮನೆಯಲ್ಲಿದ್ದ14 ಚಿನ್ನದ ಬಳೆ, 4 ಜೊತೆ ಡೈಮಂಡ್ ಓಲೆ, 02 ಕರಿಮಣಿ ಸರ , ಒಂದು ಚಿನ್ನದ ತುಳಸಿ ಹಾರ, 5 ಚಿನ್ನದ ಸರ ಮತ್ತು 3 ವೈಟ್ ಪೆಡೆಂಟ್ ,3 ಚಿನ್ನದ ಪೆಡೆಂಟ್, ಎರಡು ಎಳೆ ಚಿನ್ನದ ಸರ , ಒಂದು ಚಿನ್ನದ ಸರ ಸೇರಿದಂತೆ ತೈಲೂರಮ್ಮ ದೇವಸ್ಥಾನಕ್ಕೆ ಸೇರಿದ್ದ 8 ಲಕ್ಷ ನಗದು ಹಣ ದೋಚಿ ಪರಾರಿ ಆಗಿದ್ದಾರೆ.
ಬಾಗಿಲು ಮುರಿದಿರುವುದನ್ನು ಕಂಡು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.