ಧಾರವಾಡ- ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಭ ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾನ ನಡೆಯಲಿದ್ದು, ಅನೇಕ ಭಕ್ತರು ತಮ್ಮದೆಯಾದ ಕಲೆ, ಸಂಗೀತ ಸೇರಿ ವಿವಿಧ ರೀತಿಯಲ್ಲಿ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಪೇಡಾ ನಗರಿಯ ಇಬ್ಬರು ವಿದ್ಯಾರ್ಥಿನಿಯರು ಶ್ರೀರಾಮ ಹಾಡು ಹಾಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಹೌದು ಪೇಡಾ ನಗರಿ ಧಾರವಾಡದ ಮುಸ್ಲಿಂ ವಿದ್ಯಾರ್ಥಿನಿ ಜೋಯಾ ಹಾಗೂ ಹಿಂದೂ ವಿದ್ಯಾರ್ಥಿನಿ ಸೃಜನಾ ಶ್ರೀರಾಮನ ಹಾಡುಗಳನ್ನು ಸುಮಧುರವಾಗಿ ಹಾಡಿ ಗಮನ ಸೆಳೆದಿದ್ದಾರೆ. ಹಿಂದೂ ಮುಸ್ಲಿಂ ಎಂದು ಭೇದ ಹುಟ್ಟಿಸುವ ಕಾಲದಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಪ್ರಭ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾನೆಗೆ ತಮ್ಮ ಶ್ರೀರಾಮ ಹಾಡು ಹಾಡುವ ಮೂಲಕ ರಾಮನ ಕೃಪೆಗೆ ಪಾತ್ರರಾಗುವುದರ ಜೊತೆಗೆ, ನಾವೆಲ್ಲರು ಭಾರತೀಯರು ಒಂದೆ ಎಂಬ ಸಂದೇಶ ಸಾರಿ ಮಾದರಿಯಾಗಿದ್ದಾರೆ.
ಶ್ರೀರಾಮ ಎಲ್ಲರಿಗೂ ಆದರ್ಶ ಎಂಬುದನ್ನು ಧಾರವಾಡ ವಿದ್ಯಾರ್ಥಿಗಳು ಸಾರಿದ್ದು ಸೌಹಾರ್ದತೆ ಹಿಡಿದ ಕೈಗನ್ನಡಿಯಾಗಿದೆ.