ಕಲಬುರಗಿ: ಅಯೋಧ್ಯೆಯಲ್ಲಿ ಉದ್ಘಾಟನೆಯಾಗಲಿರುವ ಪ್ರಭು ಶ್ರೀರಾಮ ಚಂದ್ರನ ಆಹ್ವಾನ ಪತ್ರಿಕೆ ಯಲ್ಲಿರುವ ಲೋಗೋ ರಚಿಸಿದ್ದು ಕಲಬುರಗಿಯ ಕಲಾವಿದ. ಹೌದು ರಾಮಮಂದಿರ ಟ್ರಸ್ಟ್ ವಿತರಿಸಿರುವ ಆಹ್ವಾನ ಪತ್ರಿಕೆಯಲ್ಲಿ ಇರೋ ಲೋಗೋ ರಚಿಸಿದ್ದು ಕಲಬುರಗಿಯ ಕಲಾವಿದ ರಮೇಶ್ ತಿಪ್ಪನೂರ್. ಅಂದಹಾಗೆ VHP ಪ್ರಮುಖ್ ಗೋಪಾಲ್ ನಾಗರಕಟ್ಟೆ ಮೂಲಕ ಟ್ರಸ್ಟ್ ಗೆ ಲೋಗೋ ತಲುಪಿದೆ.
ದೇಶದ ವಿವಿಧ ಭಾಗಗಳಿಂದ ಸಾವಿರಾರು ಲೋಗೋಗಳು ಬಂದಿದ್ದವಂತೆ ಅದರಲ್ಲಿ ಕೊನೆಗೆ ಕಲಬುರಗಿ ಲೋಗೋ ಆಯ್ಕೆಯಾಗಿದೆ.ವಿಶೇಷ ಅಂದ್ರೆ ಪ್ರಜ್ವಲಿಸುವ ಸೂರ್ಯನ ಮಧ್ಯೆ ಶ್ರೀರಾಮ ಕಂಗೊಳಿಸುತಿದ್ದಾನೆ.. ಶ್ರೀರಾಮನ ಕೆಳಗೆ ಎರಡೂ ಬದಿಯಲ್ಲಿ ಕೈ ಮುಗಿದು ಕುಳಿತಿರುವ ಹನುಮಂತನ ಚಿತ್ರವಿದೆ..ಹೀಗಾಗಿ ಲೋಗೋ ಎಲ್ಲರ ಗಮನ ಸೆಳೆದಿದೆ.