ಬೆಂಗಳೂರು: ಲಾರಿ ಮಾಲೀಕರ ಮತ್ತು ಚಾಲಕರ ವಿರೋಧಿ ನೀತಿಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಇಂದು ಕರ್ನಾಟಕ ಟಿಪ್ಪರ್ ಲಾರಿ ಅಸೋಸಿಯೇಷನ್ ಮತ್ತು ಬೊಮ್ಮಸಂದ್ರ ಇಂಡಸ್ಟ್ರಿಯಲ್ ಸಹಯೋಗದೊಂದಿಗೆ ಆನೇಕಲ್ ಅತ್ತಿಬೆಲೆ ಅನಿರ್ದಿಷ್ಟಾವಧಿ ಮುಷ್ಕರವನ್ನ ಮಾಡಲಾಯಿತು.. ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ 10 ವರ್ಷ ಜೈಲು 7 ಲಕ್ಷ ತಂಡದ ಕಾನೂನು ವಿರುದ್ಧ ಈ ಒಂದು ಮುಷ್ಕರವನ್ನ ಕರೆ ನೀಡಲಾಗಿತ್ತು.
ಹೀಗಾಗಿ ನಾಲ್ಕು ಕೈಗಾರಿಕಾ ಪ್ರದೇಶ ಜಿಗಿಣಿ ಬೊಮ್ಮಸಂದ್ರ ಅತ್ತಿಬೆಲೆ ಸೇರಿದಂತೆ ನಾಲ್ಕು ಕೈಗಾರಿಕಾ ಪ್ರದೇಶದಲ್ಲಿ ಮುಷ್ಕರಕ್ಕೆ ಬೆಂಬಲವನ್ನ ಸೂಚಿಸಿದ್ದಾರೆ ಇನ್ನು ನೆನ್ನೆ ರಾತ್ರಿಯಿಂದಲೇ ಅನಿರ್ಧಿಷ್ಟವಧಿ ಮುಷ್ಕರಕ್ಕೆ ಕರೆ ನೀಡಿದ್ದು ಸಾರಿಗೆ ಮಾಲೀಕರು ಕೂಡ ಬೆಂಬಲವನ್ನು ಸೂಚಿಸಿದ್ದಾರೆ.. ಚಾಲಕರು ತಮ್ಮ ವೃತ್ತಿಯನ್ನು ಬಿಟ್ಟು ಹೋಗುವಂತೆ ಕೇಂದ್ರ ಸರ್ಕಾರ ಕಾನೂನನ್ನ ತಂದಿದೆ ಈ ನೀತಿಯನ್ನು ಸಂಪೂರ್ಣವಾಗಿ ಕೈಬಿಡಬೇಕು ರಾಜ್ಯದ ಗಡಿಭಾಗವಿಗಳಲ್ಲಿ ಸಾರಿಗೆ ಇಲಾಖೆ ತಪಾಸನ ಠಾಣೆಯನ್ನು ತೆಗಿಬೇಕು ಎಕ್ಸೆಸ್ ಪ್ರೊಜೆಕ್ಷನ್ ವಿರುದ್ಧ ಹಾಕುತ್ತಿರುವ 20,000 ದಂಡವನ್ನು ಕಡಿಮೆ ಮಾಡಬೇಕು.
How to Peel Ginger: ಸಿಂಪಲ್ ಟ್ರಿಕ್ಸ್ ಮೂಲಕ ಶುಂಠಿ ಸಿಪ್ಪೆ ಫಟಾಫಟ್ ಆಗಿ ಸುಲಿಯಬಹುದು..!
ಎಫ್ ಸಿ ಮತ್ತು ಪರಮೆಂಟ್ ನವೀಕರಣ ಮಾಡಿಕೊಳ್ಳಲು ನಿರಾಕರಿಸಿರುವುದನ್ನ ನಿಲ್ಲಿಸಬೇಕು ಬೆಂಗಳೂರು ನಗರಕ್ಕೆ ದಿನದ ಹಲವು ಸಮಯದಲ್ಲಿ ನಿರ್ಬಂಧ ಹೇರಿದ್ದು ಅದನ್ನು ಕೈ ಬಿಡಬೇಕು ಅಪಘಾತ ನಡೆದಾಗ ವಾಹನದ ಚಾಲಕನ ಚಾಲನಾ ಪತ್ರವನ್ನು ವಶಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಯನ್ನು ಮಾಡಲಾಗಿದೆ ಎಂದು ತಿಳಿಸಿದರು ಇನ್ನೂ ಕೇಂದ್ರ ಸರ್ಕಾರ ತಂದಿರುವ ವಿರೋಧಿ ನೀತಿಯನ್ನು ವಾಪಸ್ ತೆಗೆದುಕೊಳ್ಳದ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು..