ಬೆಂಗಳೂರು: ಬೆಂಗಳೂರಿನಲ್ಲಿ ಸೈಟ್ ಪಡೆದು, ಮನೆ ಕಟ್ಟಿಸಿಕೊಳ್ಳಬೇಕು ಅನ್ನೋದು ಬಹುತೇಕರ ಕನಸು.ಅದರಲ್ಲೂ ಬಿಡಿಎ ಸೈಟ್ಗಾಗಿ ತುಂಬಾನೇ ಕಸರತ್ತು ಮಾಡ್ತಾರೆ.ಆದ್ರೆ ಹಲವು ದಶಕದಿಂದ ನಿವೇಶನಕ್ಕಾಗಿ ಕಾಯುತ್ತಿರೋ ಮಂದಿಗೆ ಗುಡ್ ನ್ಯೂಸ್ ನೀಡಿದೆ.ಹೌದು ಕೆಂಪೇಗೌಡ ಬಡಾವಣೆ ಬಳಿಕ ಮತ್ತೆ ಮಹಾತ್ವಾಕಾಂಕ್ಷಿ ಕಾರಂತ ಬಡಾವಣೆಯಲ್ಲಿ ಸೈಟು ಹಂಚಿಕೆಗೆ ಬಿಡಿಎ ಮುಂದಾಗಿದೆ. ಇದೇ ತಿಂಗಳು 25 ರಿಂದ ಸೈಟ್ ಪಡೆಯೋಕೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ.
ಬಿಡಿಎ ಸೈಟ್ ಅಂದರೆ ಜನ ನಾ ಮುಂದು ತಾ ಮುಂದು ಅಂತ ಬರುತ್ತಾರೆ.ಕೆಂಪೇಗೌಡ ಲೇಔಟ್ ಬಳಿಕ ಇಲ್ಲಿಯವರಿಗೆ ಸೈಟ್ ಹಂಚಿಕೆ ಬಿಡಿಎ ಮಾಡಿರಲಿಲ್ಲ.ಆದ್ರೆ ಇದೀಗ ಬಹುನಿರೀಕ್ಷಿತ ಶಿವರಾಮ ಕಾರಂತ ಬಡಾವಣೆಯಲ್ಲಿ ಮೊದಲ ಹಂತದಲ್ಲಿ ಸಾರ್ವಜನಿಕರಿಗೆ ನಿವೇಶನಗಳನ್ನುಹಂಚಿಕೆಮಾಡಲು ಸಿದ್ದತೆ ನಡೆಸಿದೆ.3546 ಎಕರೆ ಜಾಗದಲ್ಲಿ ಲೇಔಟ್ ನಿರ್ಮಾಣ ಗೊಂಡಿದ್ದು,ಮೂಲಭೌತ ಸೌಕರ್ಯ ಕಲ್ಪಿಸೋ ಕಾರ್ಯ ನಡೆಯುತ್ತಿದೆ.ಈ ವೇಳೆ ಭೂಮಿ ಕೊಟ್ಟ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸೈಟ್ ಹಂಚಿಕೆಗೆ ಬಿಡಿಎ ನೀಡಿದೆ.
How to Peel Ginger: ಸಿಂಪಲ್ ಟ್ರಿಕ್ಸ್ ಮೂಲಕ ಶುಂಠಿ ಸಿಪ್ಪೆ ಫಟಾಫಟ್ ಆಗಿ ಸುಲಿಯಬಹುದು..!
ಹೌದು.. ಸುಮಾರು ಒಂದೂವರೆ ದಶಕದ ಹಿಂದೆ ಅಂದರೆ 2008 ರಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ 3,546 ಎಕರೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಅದರಂತೆ ಸ್ವಾಧೀನಪಡಿಸಿಕೊಂಡ ಭೂಮಿಯ ಪೈಕಿ 2,800 ಎಕರೆಯನ್ನು ಕಾಮಗಾರಿ ಅಭಿವೃದ್ಧಿಗಾಗಿ ಎಂಜಿನಿಯರ್ ವಿಭಾಗಕ್ಕೆ ಹಸ್ತಾಂತರಿಸಲಾಗಿದ್ದು,
ಬಡಾವಣೆ ಅಭಿವೃದ್ಧಿ ಕೆಲಸಗಳು ಶೇ.40ರಷ್ಟು ಪೂರ್ಣಗೊಂಡಿವೆ. ಉಳಿದ ಕಾರ್ಯಗಳು ನಡೆಯುತ್ತಿವೆ. ಬಿಡಿಎ ಕಾಯ್ದೆ ಪ್ರಕಾರ ಶೇ 15 ರಷ್ಟು ಪ್ರದೇಶ ಉದ್ಯಾನವನ, ಮತ್ತು ಆಟದ ಮೈದಾನಕ್ಕೆ ಕಾಯ್ದಿರಿಸಲಾಗಿದೆ. ಒಟ್ಟು 29 ಸಾವಿರ ನಿವೇಶಗಳ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದ್ದು, 12 ಸಾವಿರ ಕಾರ್ನರ್ ಸೈಟ್ ಒಳಗೊಂಡು ಮೊದಲ ಹಂತದಲ್ಲಿ 10 ಸಾವಿರ ಸೈಟ್ ಗಳಿಗೆ ಹಂಚಿಕೆಗೆ ಅಧಿಸೂಚನೆ ಹೊರಡಿಸಿದೆ.
ಈಗಾಗಲೇ 3546 ಎಕರೆ ಜಾಗದಲ್ಲಿ ಹೆಸರಘಟ್ಟ -ಯಲಹಂಕ ನಡುವೆ ಲೇಔಟ್ ನಿರ್ಮಾಣ ಮಾಡಲಾಗಿದೆ. ಶಿವರಾಮ ಕಾರಂತ ಬಡಾವಣೆಯಲ್ಲಿ 29 ಸಾವಿರ ನಿವೇಶನಗಳನ್ನು ರಚನೆ ಮಾಡಲಾಗ್ತಿದೆ, ಸದ್ಯ 300 ಎಕರೆಯನ್ನು ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸಿದ್ದು, ಈ ಪೈಕಿ ಸಾರ್ವಜನಿಕರಿಗೆ 10 ಸಾವಿರ ಸೈಟ್ ಹಾಗೂ ಭೂ ಮಾಲೀಕರಿಗೆ ಪರಿಹಾರದ ಸೈಟ್ ಹಂಚಿಕೆಗೆ ಬಿಡಿಎ ಮುಂದಾಗಿದೆ.
ನಿವೇಶನ ಹಂಚಿಕೆ ವೇಳೆ ಬಡಾವಣೆ ನಿರ್ಮಾಣಕ್ಕಾಗಿ ಭೂಮಿಯನ್ನು ಕೊಟ್ಟ ರೈತರಿಗೆ ಮೊದಲ ಆದ್ಯತೆ ನೀಡಲಾಗ್ತದೆ .ನಂತರ ಗ್ರಾಹಕರಿಗೆ ವಿತರಿಸಲು ಉದ್ದೇಶಿಲಾಗಿದೆ.ಮೂಲಭೂತ ಸೌಕರ್ಯ ಕಲ್ಪಿಸಲು 2500 ಕೋಟಿ ಟೆಂಡರ್ ಕರೆದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಚದರ ಅಡಿಗೆ 4900 ದರ ಫಿಕ್ಸ್ ಮಾಡಲಾಗಿದೆ.
ಒಟ್ಟಿನಲ್ಲಿ ಬಿಡಿಎ ನಿರ್ಮಾಣ ಮಾಡಿರೋ ಬಹುತೇಕ ಲೇಔಟ್ ಗಲ್ಲಿ ಸೈಟ್ ಪಡೆದವರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಕಾರಂತ ಬಡಾವಣೆ ಕೊಡ್ತಿರೋ ಆಸಕ್ತಿ ಇತರೆ ಲೇಔಟ್ ಗಳಿಗೆ ನೀಡ್ತಿಲ್ಲ,ಒಂದು ಲೇಔಟ್ ಸುಣ್ಣ ಮತ್ತೊಂದು ಲೇಔಟ್ ಬೆಣ್ಣೆ ಹಚ್ಚುವ ಕೆಲ್ಸ ಪ್ರಾಧಿಕಾರ ಮಾಡ್ತಿದೆ. ಒಂದು ದಶಕದ ಹಿಂದೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದ ಲೇಔಟ್ ನಲ್ಲಿ ಇದೀಗ ಸೈಟ್ ಹಂಚಿಕೆಗೆ ಮುಂದಾಗಿದೆ. ಆದ್ರೆ ಸೈಟ್ ಖರೀದಿಸೋದಕ್ಕೆ ಜನ ಉತ್ಸಾಹ ತೋರುತ್ತಾರಾ ಅನ್ನೋದೇ ಯಕ್ಷ ಪ್ರಶ್ನೆ.