ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಒಳಮೀಸಲಾತಿ ಜಾರಿಗೆ ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀ್ಮಾನ ತೆಗದುಕೊಂಡಿದೆ.ಈ ಮೂಲಕ ಒಳ ಮೀಸಲಾತಿ ವಿಚಾರದ ಚೆಂಡನ್ನ ಕೇಂದ್ರದ ಅಂಗಳಕ್ಕೆ ಕಾಂಗ್ರೆಸ್ ಸರ್ಕಾರ ಎಸೆದಿದೆ. ದಲಿತ ಸಮುದಾಯಗಳ ದಶಕಗಳ ಬೇಡಿಕೆ ಈಡೇರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ನ್ಯಾಯಮೂರ್ತಿ ಸದಾಶಿವ ಆಯೋಗದಂತೆ ಒಳ ಮೀಸಲಾತಿ ವಿಚಾರದ ಬಗ್ಗೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಬಿಸಿಬಿಸಿ ಚರ್ಚೆಯಾಯ್ತು.. ಅಂತಿಮವಾಗಿ ಸಂವಿಧಾನದ ಅನುಚ್ಚೇದ 341ಕ್ಕೆ ತಿದ್ದುಪಡಿ ತರಲು ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರವಾಯ್ತು. ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳು ಪರಿಶಿಷ್ಟ ಜಾತಿಪಟ್ಟಿಯಲ್ಲಿದ್ದು, ಅವುಗಳನ್ನ ಹಾಗೆಯೇ ಮುಂದುವರೆಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಯ ಮಾಡಲು ಸಂಪುಟ ಅನುಮೋಧನೆ ನೀಡಿದೆ.
How to Peel Ginger: ಸಿಂಪಲ್ ಟ್ರಿಕ್ಸ್ ಮೂಲಕ ಶುಂಠಿ ಸಿಪ್ಪೆ ಫಟಾಫಟ್ ಆಗಿ ಸುಲಿಯಬಹುದು..!
ಇನ್ನು ೨೦೧೧ ಜನಸಂಖ್ಯೆ ಆಧಾರದ ಮೇಲೆ ನ್ಯಾ. ನಾಗಮೋಹನ್ ದಾಸ್ ವರದಿ ನೀಡಲಾಗಿತ್ತು. ಸಂವಿಧಾನದ ಆರ್ಟಿಕಲ್ ೩೪೧ ಕ್ಕೆ ಖಂಡ ಮೂರನ್ನ ಸೇರಿಸದೇ ಹೋದರೆ ಒಳ ಮೀಸಲಾತಿ ನೀಡಲು ಸಾಧ್ಯವಿಲ್ಲ. ಪಾರ್ಲಿಮೆಂಟ್ ಮೂಲಕವೇ ಇದು ಆಗಬೇಕು.. ರಾಜ್ಯ ಸರ್ಕಾರ ಇದನ್ನು ಮಾಡಲು ಸಾಧ್ಯವೇ ಇಲ್ಲ. ರಿಜೆಕ್ಟ್ ಆಗಿರುವ ವರದಿಯನ್ನು ನಾವು ಕ್ಯಾಬಿನೆಟ್ ಗೆ ತರಲು ಸಾಧ್ಯವಿಲ್ಲ.
೧೦೧ ಜಾತಿಗಳ ಹಿತ ಕಾಪಾಡಲು ಆರ್ಟಿಕಲ್ ೩೪೧ ಗೆ ತಿದ್ದುಪಡಿ ತನ್ನಿ ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ ಎಂದು ಸಚಿವರು ಹೇಳಿದ್ರು. ಒಟ್ಟಾರೆ,ಒಳಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರ ಜಾಣ ನಡೆ ಪ್ರದರ್ಶನ ಮಾಡಿದ್ದು,ಕೇಂದ್ರದ ಕಡೆ ಬೊಟ್ಟು ಮಾಡಲು ಮುಂದಾಗಿದೆ.ಈ ಮೂಲಕ ಲೋಕಸಭೆ ಚುನಾವಣೆಗೆ ಸದ್ದಿಲ್ಲದೇ ಕೈ ನಾಯಕರು ಸಿದ್ಧತೆ ಆರಂಭಿಸಿದ್ದಾರೆ.