ಕಾರವಾರ:- ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಸಭೆ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾದ G +2 ವಸತಿ ಮನೆಗಳ ಕಾಮಗಾರಿಯನ್ನು ಬೇಗ ಪೂರ್ಣ ಗೊಳಿಸಿ ಪಲಾನುಭವಿಗಳಿಗೆ ಹಸ್ತಾಂತರ ಮಾಡುವಂತೆ ಇಂದು ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ದಾಂಡೇಲಿ ಸಮಗ್ರ ಹೋರಾಟ ಸಮಿತಿಯ ಹೋರಾಟಗಾರರು ಆದ ಆಕ್ರಂ ಖಾನ್, ಅಶೋಕ್ ಪಾಟೀಲ್, ರಾಘವೇಂದ್ರ ಗಡೆಪ್ಪನವರ್, ದತ್ತಾತ್ರೇಯ ಹೆಗ್ಡೆ, ಗೌಸ ಬಡಿಗೇರಿ, ಶ್ಯಾಮ್ ಬೆಂಗಳೂರು, ಮುತುಜ ಚಬ್ಬಿ ಇವರ ನೇತೃತ್ವದಲ್ಲಿ ಹೋರಾಟ ನಡೆದಿದೆ.
ಮಾಧ್ಯಮ ಮಿತ್ರ ಬಸವರಾಜು ಸಹ ಇವರ ಹೋರಾಟಕ್ಕೆ ಬೆಂಬಲ ಕೊಟ್ಟು, ಸರ್ಕಾರಕ್ಕೆ ಹಾಗೂ ಕರ್ನಾಟಕ ಗೃಹ ಮಂಡಳಿ ಮತ್ತು ಯೋಜನಾ ನಿರ್ದೇಶಕರಿಗೆ ಕೂಡಲೇ ಈ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ಇನ್ನೂ ಹೋರಾಟಗಾರ ಆಕ್ರಂ ಖಾನ್ ಅವರ ಮನವಿ ಸ್ವೀಕಾರ ಕಾರವಾರ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯ ನಿರ್ವಾಹಕ ಅಭಿಯಂತರರು ಆದ ರವಿಕುಮಾರ್ ಕೆ.ಎಂ ಅವರು ಮನವಿ ಸ್ವೀಕಾರ ಮಾಡಿ ಈ ಸಮಸ್ಯೆ ಕೂಡಲೇ ಬಗೆಹರಿಸುವುದಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬರಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿ ಬಸವರಾಜು ಕರ್ನಾಟಕ ಗೃಹ ಮಂಡಳಿ ಕಮಿಷನರ್ ಕವಿತಾ ಮನಿಕೇರಿ ಅವರಿಗೆ ಕರೆ ಮಾಡಿ ಈ ಸಮಸ್ಯೆಗಳನ್ನು ಬಗೆ ಹರಿಸುವಸಂತೆ ಮನವಿ ಮಾಡಿದರು. ಒಟ್ಟಾರೆ ದಿನದಿಂದ ದಿನಕ್ಕೆ ಈ ಸಮಸ್ಯೆ ಬಿಗಡಾಯಿಸುತ್ತಿದ್ದು, ಮುಂದೆ ಯಾವ ರೀತಿ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.