ಬೆಂಗಳೂರು:- ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
215ನೇ ಫ್ಲವರ್ ಶೋ ವನ್ನು ಬಸವಣ್ಣನವರ ಪ್ರತಿಮೆಗೆ ಹೂ ಅರ್ಪಣೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವೀಕ್ಷಣೆ ಮಾಡಿದ್ದು, ಸಚಿವ ರಾಮಲಿಂಗರೆಡ್ಡಿ ಕೂಡ ಸಾಥ್ ನೀಡಿದರು. ಈ ಬಾರಿ ಫ್ಲವರ್ ಶೋನಲ್ಲಿ 68 ಬಗೆಯ 32 ಲಕ್ಷ ಹೂವುಗಳ ಬಳಕೆ ಮಾಡಲಾಗಿದೆ. ಇಂದಿನಿಂದ ಜನವರಿ 28ರವರೆಗೆ ಫಲಪುಷ್ಪ ಪ್ರದರ್ಶನಕ್ಕೆ ಅವಕಾಶವಿದ್ದು, ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ವೀಕ್ಷಿಸಬಹುದಾಗಿದೆ.
ಫ್ಲವರ್ ಶೋ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಸಾಕಷ್ಟು ಜನ ಸ್ವಾಮೀಜಿಯವರು ನನ್ನ ಭೇಟಿಮಾಡಿದರು. ಸಾಂಸ್ಕೃತಿಕ ನಾಯಕ ಅಂತ ಬಸವಣ್ಣನವರನ್ನ ಕರೆಯಬೇಕು ಅಂತ ಒತ್ತಾಯ ಮಾಡಿದರು. ಹೀಗಾಗಿ ಕ್ಯಾಬಿನೆಟ್ ಮಿಟಿಂಗ್ನಲ್ಲಿ ತೀರ್ಮಾನ ಮಾಡಿದ್ದೇವೆ. ಇನ್ಮುಂದೆ ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತೆ. ಶಿಕರಿಪುರದ 46 ಎಕರೆ ಜೈಲಿನ ಜಾಗಕ್ಕೆ ಅಲ್ಲಮ ಪ್ರಭುಜಾಗಕ್ಕೆ ನಾಮಕರಣ ಮಾಡಿದ್ದೇವೆ. ಅನುಭವ ಮಂಟಪದ ಬಳಿ ಫ್ರಿಡಂ ಪಾರ್ಕ್ ಅಂತ ಪಾರ್ಕ್ ಇದೆ. ಆ ಪಾರ್ಕ್ ಗೆ ಅಲ್ಲಮ ಪ್ರಭು ಪಾರ್ಕ್ ಅಂತ ಕರೆಯಲಾಗುತ್ತೆ ಎಂದು ಹೇಳಿದ್ದಾರೆ.
ಲಾಲ್ ಬಾಗ್ ಎಂದಿನಂತೆ ಈ ವರ್ಷವು ಫಲಪುಷ್ಪ ಪ್ರದರ್ಶನವನ್ನು ಗಣರಾಜ್ಯೋತ್ಸವದ ಪ್ರಯುಕ್ತ ಅಯೋಜನೆ ಮಾಡಿದ್ದಾರೆ. ಈ ವರ್ಷದ ಫ್ಲವರ್ ಶೋ ನಾ ನಾನು ಮತ್ತೆ ಡಿಸಿಎಂ ಉದ್ಘಾಟನೆ ಮಾಡಿದ್ದೇವೆ. 12 ಶತಮಾನದಲ್ಲಿದಲ್ಲಿ ಸಮಾನತೆಯನ್ನ ನಿರ್ಮಾಣ ಮಾಡುವ ಸಲುವಾಗಿ ಜಾತಿ ಹೋಗಲಾಡಿಸುವ ಸಲುವಾಗಿ ಬಸವಣ್ಣನವರು ಹೋರಾಡಿದ್ದರು. ಇವುಗಳನ್ನ ಪರಿಚಯಿಸುವ ದೃಷ್ಟಿಯಿಂದ ತೋಟಗಾರಿಕೆ ಇಲಾಖೆ ಪ್ರದರ್ಶನ ಏರ್ಪಡಿಸಿದೆ ಎಂದರು.