ಹಾಸನ:- ನಾವು ರೈತರ ಮಕ್ಕಳು, ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.
ಹಾಸನ ಜಿಲ್ಲೆಯ ಬೇಲೂರಿನಲ್ಲಿಂದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ದೇವೇಗೌಡ, ಈ ರಾಷ್ಟದ ಚುನಾವಣೆ ತುಂಬಾ ವಿಭಿನ್ನವಾಗಿದೆ. ನಿಮ್ಮ ಇಷ್ಡು ವರ್ಷ ದ ರಾಜಕೀಯ ಜೀವನದಲ್ಲಿ ಜಾತ್ಯಾತೀತ ತತ್ವದಡಿ ಕೆಲಸ ಮಾಡಿದ್ರಿ. ಆದರೆ ಕೊನೆಯ ಘಟ್ಟದಲ್ಲಿ ಯಾಕೆ ಮಾರ್ಪಾಡು ಅಂತಾ ಕೇಳ್ತಾರೆ. ಹೌದು ಮಾರ್ಪಾಡು ಮಾಡಿದ್ದೇನೆ. ನಾನು ಮೊಮ್ಮಗನ ಗೆಲ್ಲಿಸಿ ಅಂತಾ ಬಂದಿಲ್ಲ. ಈ ಜಿಲ್ಲೆಯ ಅಭಿವೃದ್ಧಿಗಾಗಿ ಬಂದಿದ್ದೇನೆ. ದೇವೇಗೌಡರು ದೇವೇಗೌಡರ ಮಕ್ಕಳು ಯಾರಿಗೆ ಅನ್ಯಾಯ ಮಾಡಿದ್ದೇವೆ ಹೇಳಿ ಎಂದು ತಮ್ಮ ಕುಟುಂಬದ ವಿರುದ್ಧದ ಟೀಕೆಗೆ ತಿರುಗೇಟು ನೀಡಿದರು.
ನಾವು ರೈತರ ಮಕ್ಕಳು. ನಿಮ್ಮನ್ನ ಬಿಟ್ಟು ನಾವು ಎಲ್ಲಿಗೆ ಹೋಗೋಣ. ಇದೇ ಕೊನೆ ಅಲ್ಲ, ಮತ್ತೆ ಬರುತ್ತೇನೆ. ಈ ದೇಶದಲ್ಲಿ ಕಾಂಗ್ರೆಸ್ ಗಾಗಿ ನನ್ನ ಪ್ರಾಣವನ್ನೇ ತೆತ್ತಿದ್ದೇನೆ. ನಾವು ಯಾರಿಗೆ ಅನ್ಯಾಯ ಮಾಡಿದ್ದೇವೆ ಸತ್ಯ ಹೇಳಿ. ನಾವು ಯಾರನ್ನು ಬಿಟ್ಟುಕೊಡುವುದಿಲ್ಲ. ನನ್ನ ಅಣ್ಣ ತಮ್ಮಂದಿರು ಮುಸ್ಲಿಂ ಬಾಂದವರು. ನಿಮ್ಮರಕ್ಷಣೆಗಾಗಿ ಈ ದೇಹ ಸವೆಸಿದ್ದೇನೆ ಎಂದು ಹೇಳುತ್ತ ಬಾವುಕರಾದರು
ನಾವು ರೈತರ ಮಕ್ಕಳು. ನಿಮ್ಮನ್ನ ಬಿಟ್ಟು ನಾವು ಎಲ್ಲಿಗೆ ಹೋಗೋಣ. ಇದೇ ಕೊನೆ ಅಲ್ಲ, ಮತ್ತೆ ಬರುತ್ತೇನೆ. ಈ ದೇಶದಲ್ಲಿ ಕಾಂಗ್ರೆಸ್ ಗಾಗಿ ನನ್ನ ಪ್ರಾಣವನ್ನೇ ತೆತ್ತಿದ್ದೇನೆ. ನಾವು ಯಾರಿಗೆ ಅನ್ಯಾಯ ಮಾಡಿದ್ದೇವೆ ಸತ್ಯ ಹೇಳಿ. ನಾವು ಯಾರನ್ನು ಬಿಟ್ಟುಕೊಡುವುದಿಲ್ಲ. ನನ್ನ ಅಣ್ಣ ತಮ್ಮಂದಿರು ಮುಸ್ಲಿಂ ಬಾಂದವರು. ನಿಮ್ಮರಕ್ಷಣೆಗಾಗಿ ಈ ದೇಹ ಸವೆಸಿದ್ದೇನೆ ಎಂದು ಹೇಳುತ್ತ ಬಾವುಕರಾದರು.
ಯಾರೋ ಒಬ್ಬ ಅನಾವಶ್ಯಕವಾಗಿ ರೇವಣ್ಣ ಅವರ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಅವರು ದೊಡ್ಡೋರು, ತುಂಬಾ ದೊಡ್ಡ ವ್ಯಕ್ತಿ ಅವರು. ನಾನು ನನ್ನ ಹೆಂಡತಿ ಒಡವೆ ಅಡವಿಟ್ಟು ಪಡುವಲಹಿಪ್ಪೆ ಗ್ರಾಮದಲ್ಲಿ ಜಮೀನು ತಗೊಂಡ್ರೆ ನನ್ನ ಮೇಲೆ ಕೇಸ್ ಹಾಕಿದ್ರು. ಸುಪ್ರೀಂಕೋರ್ಟ್ ವರೆಗೂ ತೆಗೆದುಕೊಂಡು ಹೋದರು.. ಇಂತಹ ನೋವಿನಿಂದ ಬಂದವನು ನಾನು ಎಂದರು.