ದಾವಣಗೆರೆ:- ಸಿಎಂ ವಿರುದ್ಧ ಅನಂತಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಮಾಜಿ ಸಚಿವ MP ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಹೇಳಿಕೆಯನ್ನ ಪಕ್ಷವು ಒಪ್ಪಲ್ಲ, ರಾಜ್ಯಾಧ್ಯಕ್ಷರು ಒಪ್ಪಲ್ಲ. ಸಿದ್ದರಾಮಯ್ಯ ಗೌರವಯುತ ಸ್ಥಾನದಲ್ಲಿದ್ದಾರೆ. ಮೇಲಾಗಿ ಹಿರಿಯರು. ಹಗುರವಾಗಿ ಏಕವಚನದಲ್ಲಿ ಮಾತನಾಡಿದ್ದನ್ನ ಖಂಡಿಸುತ್ತೇವೆ.
ಹಿಂದೆ ಕೂಡ ಹೆಗಡೆ ಸಂವಿಧಾನ ಬದಲಾಚಣೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಆಗಲೂ ಕೂಡ ನಾವು ಖಂಡಿಸಿದ್ದೇವೆ. ಈಗಲು ಅವರ ಹೇಳಿಕೆಯನ್ನ ಖಂಡಿಸುತ್ತೇವೆ. ರಾಜಕೀಯವಾಗಿ ಟೀಕೆ ಮಾಡಬಹುದು. ಆದರೆ, ಏಕವಚನದಲ್ಲಿ ಪದ ಬಳಕೆ ಸರಿಯಾಗಿಲ್ಲ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.