ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಹವಾಮಾನ ಹಾಗು ಮಣ್ಣಿನ ಗುಣ ಒಂದೇ ಆಗಿರುವುದರಿಂದ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಲು ಕಾರಣವಾಗಿದೆ..
ಮಾನ್ಯ ಶರದ್ ಪವಾರ್ ರವರು ನಾಲ್ಕು ಬಾರಿ ಮಹಾರಾಷ್ಟ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು, ಕೇಂದ್ರದಲ್ಲಿ ರಕ್ಷಣಾ ಮಂತ್ರಿ ಮತ್ತು ಕೃಷಿ ಮಂತ್ರಿಯಂತಹ ಹುದ್ದೆಗಳನ್ನು ನಿರ್ವಹಣೆ ಮಾಡಿದ ಮಹಾನೀಯರು. ಅಲ್ಲದೇ ಅತೀದೊಡ್ಡ ಕ್ರೀಡಾ ಸಂಸ್ಥೆ ಬಿ.ಸಿ.ಸಿ.ಐ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಸದ್ದು ಮಾಡಿದವರು…
ಮಹಾರಾಷ್ಟ್ರದ ಬಾರಮತಿಯ ಕೃಷಿ ವಿಜ್ಞಾನ ಕೇಂದ್ರಲ್ಲಿ ಆಯೋಜಿಸಿದ್ದ 2024 ಮೆಗಾ ಕೃಷಿ ಎಕ್ಸ್ಪೋ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಯವರು,
ಶರದ್ ಪವಾರ್ ರವರು ಕೇಂದ್ರ ಕೃಷಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲಾಖೆ ಹಾಗೂ ರೈತಪರ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ ಮಹಾತ್ಮರು. ಇವರು ಕೇಂದ್ರದ ಕೃಷಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇಶಾದ್ಯಂತ 700 ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಿ ಅದರ ಅಭಿವೃದ್ಧಿಗೆ ಕಾರಣರಾದವರು..
ಇವರ ಅವಧಿಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ಕೃಷಿ ಉತ್ಪಾದನೆಯಲ್ಲಿ ಸಾಧನೆ ಮಾಡಿದ ಗೌರವ ಮಾನ್ಯ ಶರದ್ ಪವಾರ್ ರವರಿಗೆ ಸಲ್ಲುತ್ತದೆ.
30 ವರ್ಷಗಳ ಹಿಂದೆ ಬಾರಾಮತಿಯು ಬರುಡು ಭೂಮಿಯಿಂದ ಕೂಡಿದ್ದು, ಬರ ಪೀಡಿತ ಪ್ರದೇಶವಾಗಿತ್ತು. ಬಾರಾಮತಿ ಇಂದು ಮಾನ್ಯ ಶರದ್ ಪವಾರ್ ರವರ ಶ್ರಮದಿಂದ ಹಾಗೂ ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ಸಂಶೋಧನೆ ಹಾಗೂ ಸಹಕಾರದಿಂದ ಬಾರಾಮತಿ ಕೃಷಿ ರಂಗದಲ್ಲಿ ಅತ್ಯುನ್ನತವಾದ ಅಭಿವೃದ್ಧಿಯನ್ನು ಕಂಡಿದೆ. ಇದಕ್ಕೆ ಸಾಕ್ಷಿಯೆಬಂತೆ ಅಂತರರಾಷ್ಟಿಯ ಅಂಗೂರು ಸಮ್ಮೇಳನ ಬಾರಾಮತಿಯಲ್ಲಿ ಆಯೋಜನೆಗೊಂಡಿದ್ದು..
1992ರಲ್ಲಿ ಬಾರಾಮತಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬಯೋಟೆಕ್ ಅಂಡ್ ಅಬಯೋಟಿಕ್ ಸೈನ್ಸ್ ಮ್ಯಾನೇಜ್ಮೆಂಟ್ ಸಂಸ್ಥೆ ಪ್ರಾರಂಭವಾಗಿದ್ದು ಬಾರಾಮತಿಯ ಹೆಗ್ಗಳಿಕೆ. ಅಲ್ಲದೇ ಕರ್ನಾಟಕದ ಬೆಳಗಾವಿ ಜಿಲ್ಲೆಯ ಮತ್ತಿಕೊಪ್ಪದಲ್ಲಿ ಐ.ಸಿ.ಎ.ಆರ್- ಕೆ.ವಿ.ಕೆ ಪ್ರಾರಂಭಗೊಳ್ಳಲು ಮಾನ್ಯ ಶರದ್ ಪವಾರ್ ರವರ ಶ್ರಮವಿದೆ.. ಹಾಗೂ ಈ ಕಟ್ಟಡದ ಉದ್ಘಾಟನೆಯೂ ಸಹ ಮಾನ್ಯ ಶರದ್ ಪವಾರ್ ರಿಂದಲೇ ಆಗಿದ್ದಕ್ಕೆ ಕರ್ನಾಟಕ ಸರ್ಕಾರವು ಹೃದಯ ಪೂರ್ವಕ ಅಭಿನಂದನೆಯನ್ನು ಸಲ್ಲಿಸಲಿದೆ..
30 ವರ್ಷಗಳ ಹಿಂದೆ ಬಾರಾಮತಿಯಲ್ಲಿ ಪ್ರಾರಂಭವಾದ ಕೃಷಿ ವಿಜ್ಞಾನ ಕೇಂದ್ರ ಇಂದು ಕೃಷಿ ಅಭಿವೃಧ್ಧಿಗೆ ಸಾಕಷ್ಟು ಕೊಡುಗೆ ನೀಡಿದಲ್ಲದೇ ಅನೇಕ ವೈಜ್ಞಾನಿಕ ಸಂಶೋಧನೆಗೂ ಇಡೀ ದೇಶದಲ್ಲೇ ಬಾರಾಮತಿ ಕೃಷಿ ವಿಜ್ಞಾನ ಕೇಂದ್ರ ಹೆಸರುವಾಸಿಯಾಗಿದೆ. ಈ ಸಂಸ್ಥೆ ದೇಶವ್ಯಾಪಿ ಪ್ರಸಿದ್ಧಿಯಾಗಲೂ ಕಾರಣಕರ್ತರಾದ ಮಾನ್ಯ ಶರದ್ ಪವಾರ್ ರವರು ಹಾಗೂ ಸಂಸ್ಥೆಯ ಅಧ್ಯಕ್ಷ ಶ್ರೀ ರಾಜೇಂದ್ರ ಪವಾರ್ಗೂ ಮತ್ತಷ್ಟು ಅಭಿವೃಧ್ಧಿ ಕಾರ್ಯಗಳನ್ನು ಕೈಗೊಳ್ಳಲು ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು…
ಮಾನ್ಯ ಶರದ್ ಪವಾರ್ ರಂತಹ ರಾಜಕಾರಣಿ ಎಲ್ಲಾ ಕಡೆಯೂ ಸಲ್ಲುತ್ತಾರೆ. ಅವರು ಅಜಾತಶತ್ರು ಇದ್ದಂತೆ, ಕೃಷಿ ಮಂತ್ರಿಯಾಗಿದ್ದ ವೇಳೆ ಅವರು ನೀಡಿದಂತಹ ಕೃಷಿ ಯೋಜನೆಗಳು ಇನ್ನೂ ಹಸಿರಾಗಿವೆ. ಇಂತಹ ಕೃಷಿ ಮಂತ್ರಿಗಳು ಇತರೇ ಕೃಷಿ ಸಚಿವರುಗಳಿಗೆ ಮಾದರಿಯಾಗಿ ನಿಲ್ಲುತ್ತಾರೆಂದು ಹೇಳಿದರು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮಾನ್ಯ
ಶರದ್ ಪವಾರ್ ಜೀರವರ ಕೊಡುಗೆ ಅಪಾರವಾಗಿದ್ದು, ಈ ಸಾಧನೆ ಮೂಲಕ ಮಹಾರಾಷ್ಟ ವಿವಿಧ ಬೆಳೆಗಳನ್ನು ಬೆಳೆಯುವಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.
ಮಹಾರಾಷ್ಟ ಹಾಗೂ ಕರ್ನಾಟಕದ ಹವಾಮಾನ ಹಾಗೂ ಮಣ್ಣಿನ ಗುಣ ಒಂದೇ ಇರುವುದು ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಲು ಕಾರಣವಾಗಿದೆ…
ದೇಶದಲ್ಲಿ ರಾಜಸ್ಥಾನ ಅತಿಹೆಚ್ಚು ಒಣಭೂಮಿ ವಿಸ್ತೀರ್ಣ ಹೊಂದಿದ್ದರೆ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಈ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರ ಕೃಷಿಕರಿಗೆ ಒಣಭೂಮಿಯಲ್ಲಿ ನೀರಿನ ಬಳಕೆಯ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿಗೊಳಿಸಿ ರೂ.2000ಕೋಟಿಗಳನ್ನು ಮೀಸಲಿರಿಸಿದೆ. ಅಲ್ಲದೇ ಗ್ರಾಮೀಣ ಮತ್ತು ಬಡಜನರ ಅನುಕೂಲಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರ ಅನ್ನಭಾಗ್ಯ, ಗೃಹಲಕ್ಷಿ, ಸ್ರೀಶಕ್ತಿ, ಗೃಹಜ್ಯೋತಿ ಹಾಗೂ ಯುವಜನ ಯೋಜನೆಗೆ ಸುಮಾರು ರೂ.72000ಕೋಟಿಗಳ ಅನುದಾನ ನೀಡುತ್ತಿದೆ…
ಸಿರಿಧಾನ್ಯ ಮತ್ತು ಸಾವಯವ ಬೆಳೆಗಳಿಗೆ ಪ್ರೋತ್ಸಾಹ ಹಾಗೂ ಮಾರುಕಟ್ಟೆ ಕಲ್ಪಿಸಿಕೊಡುವ ಸಲುವಾಗಿ ಇದೇ ಜನವರಿ 5,6 ಮತ್ತು 7ರಂದು ನಮ್ಮ ಸರ್ಕಾರ ಅಂತರರಾಷ್ಟಿಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳವನ್ನು ಆಯೋಜಿಸಿ ಯಶಸ್ವಿಯಾಗಿದ್ದೇವೆ…
ಸಿರಿಧಾನ್ಯಗಳ ಬೆಳೆಗೆ ಪ್ರೋತ್ಸಾಹ ನೀಡಲು ಹೆಕ್ಟೇರ್ ರೂ.10000 ದಂತೆ 2 ಹೆಕ್ಟೇರ್ಗೆ ರೂ.20000ಗಳ ಪ್ರೋತ್ಸಾಹ ಧನ ರೈತರಿಗೆ ನೀಡುತ್ತಿದ್ದೇವೆ. ಕೃಷಿ ನವೋದ್ಯಮ ಪ್ರಾರಂಭಿಸಲು ರೂ.10ಕೋಟಿಗಳ ಅನುದಾನ ಹಾಗೂ ಬೃಹತ್ ಹಾರ್ವೆಸ್ಟರ್ ಹಬ್ಗಳಿಗೆ ರೂ.50ಕೋಟಿಗಳ ಅನುದಾನವನ್ನು ನೀಡಲಾಗುತ್ತಿದೆ…
2024ರ ಮೆಗಾ ಕೃಷಿ ಎಕ್ಸ್ಪೋಗೆ ನನ್ನನ್ನು ಕರೆದು ಅಹ್ವಾನಿಸಿದ ಹಿರಿಯರು, ನನ್ನ ಹಿತೈಷಿಗಳಾದ ಶರದ್ ಪವಾರ್ ರವರು ಹಾಗೂ ಭಾರಾಮತಿ ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷರು ಶ್ರೀ ರಾಜೇಂದ್ರ ಪವಾರ್, ಮಹಾರಾಷ್ಟçದ ನಲ್ಮೇಯ ರೈತರು ಹಾಗೂ ಮಾಧ್ಯಮದವರಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.