ಚಿತ್ರದುರ್ಗ:- ಜಿಲ್ಲೆ ಹಿರಿಯೂರು ಪಟ್ಟಣ ಬಳಿ ವ್ಯಕ್ತಿಯೋರ್ವನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಜರುಗಿದೆ.
29 ವರ್ಷದ ಅರುಣ್ ಕುಮಾರ್ ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ. ಹಿರಿಯೂರು ಬಳಿ ಊಟಕ್ಕೆ ಡಾಬಾ ನಿಂತಿದ್ದ ವೇಳೆ ಬಂದ ಇಬ್ಬರು ದುಷ್ಕರ್ಮಿಗಳು ಅರುಣ್ ಕುಮಾರ್ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಅರುಣ್ ಕೈ ಮತ್ತು ಮುಖಕ್ಕೆ ಗಾಯವಾಗಿದ್ದು, ಅವರನ್ನು ಚಿತ್ರದುರ್ಗಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಖಾಸಗಿ ಬಂಕ್ ನಲ್ಲಿ ಮ್ಯಾನೇಜರ್ ಆಗಿರುವ ಅರುಣ್, ಇಂದು ರಾಜಹಂಸ ಬಸ್ ನಲ್ಲಿ ಚಿತ್ರದುರ್ಗದಿಂದ ಬೆಂಗಳೂರು ತೆರಳುತ್ತಿದ್ದರು. ಆದ್ರೆ, ಹಿರಿಯೂರು ಬಳಿ ಖಾಸಗಿ ಡಾಬಾ ಬಳಿ ಬಸ್ ನಿಂತಾಗ ವಾಶ್ ರೂಮ್ ಗೆ ಹೋಗಿ ಬಸ್ ಏರಲು ಬರುವಾಗ ಆ್ಯಸಿಡ್ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ.
ಅರುಣ್ ಕುಮಾರ್ ಓರ್ವ ಯುವತಿಯನ್ನು ಪ್ರೀತಿಸಿಸುತ್ತಿದ್ದರು. ಆದ್ರೆ, ಯುವತಿ ಕಡೆಯವರಿಂದ ಪ್ರೇಮಕ್ಕೆ ವಿರೋಧವಿದ್ದು, ಪ್ರೀತಿಸಿದ ಯುವತಿ ಕಡೆಯವರಿಂದಲೇ ಈ ಕೃತ್ಯ ಎಸಗಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ.