ರಾಯಚೂರು: ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಫೈಲ್ಗಳನ್ನ ಇ- ಫೈಲ್ ಸಿಸ್ಟಮ್ಗೆ ಅಳವಡಿ ಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಹಿನ್ನಲೆ ರಾಯಚೂರು ಜಿಲ್ಲೆಯ ತಹಶಿಲ್ದಾರರು ಹಾಗೂ ಸಹಾಯಕ ಆಯುಕ್ತರನ್ನ ಕಂದಾಯ ಸಚಿವ ಕೃಷ್ಣಾ ಬೈರೆಗೌಡ ತರಾಟೆಗೆ ತೆಗೆದುಕೊಂಡರು. ನಗರದ ಜಿಲ್ಲಾ ಪಂಚಾ ಯತ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೆಗೌಡ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಇ- ಫೈಲ್ ಸಿಸ್ಟಮ್ ಸಮರ್ಪಕ ಜಾರಿ ಮಾಡದ ಹಿನ್ನೆಲೆ ಗರಂ ಆದ ಸಚಿವರು ರಾಯಚೂರು ಉಪವಿಭಾಗ ಸಹಾಯಕ ಆಯುಕ್ತರು, ದೇವದುರ್ಗ ಹಾಗೂ ಮಾನ್ವಿ ತಹಶಿಲ್ದಾರಗಳ ವಿರುದ್ದ ಹರಿಹಾಯ್ದರು. ಕತ್ತೆ ಕಾಯ್ತಿದ್ದಿರಾ..? ಜನರಿಂದ ಫಿಸಿಕಲ್ ಫೈಲ್ ಸ್ವೀಕರಿಸದಂತೆ ಹೇಳಿಲ್ವಾ..? 5 ತಿಂಗಳಿಂದ ಹೇಳ್ತಾಯಿದಿನಿ ಯಾರಿಗೆ ಯಾಮಾರಿಸುತ್ತಿದ್ದೀರಿ ಅಂತ ಬೇಸರ ವ್ಯಕ್ತಪಡಿಸಿದರು. ಪಾರದರ್ಶಕತೆಯಿಂದ ಆಡಳಿತ ನಡೆಯಬಾರದು, ಫೈಲ್ಗಳು ಈ ಟೇಬಲ್ ನಿಂದ ಆ ಟೇಬಲ್ ಗೆ ಹೋಗ್ತಾಯಿರಬೇಕಾ.
ಯಾಕೆ ಇ- ಫೈಲ್ ಸಿಸ್ಟಮ್ ಪ್ರಗತಿ ಕಾಣ್ತಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಜನರನ್ನು ಅಲೆದಾಡಿ ಸೋದೆ ನಿಮ್ಮ ಕೆಲಸಾನಾ,ಫೈಲ್ ಇಟ್ಕೊಂಡು,ಬೇಕಾದವರದ್ದು ಮೂವ್ ಮಾಡಿ, ಬೇಡವಾಗಿರೋರ್ದು ಕಳೆದು ಹಾಕೋದಾ..? ಜನ ಕಚೇರಿಗೆ ಅಲೆದು ಅಲೆದು ಸಾಯ್ಬೇಕಾ..? ಎಸಿ ಕಚೇರಿಯಿಂದ ಇ-ಫೈಲ್ ಶುರುವಾಗಬೇಕಿತ್ತು, ನಿಮಗೆ ಮೈಂಡ್ ಇಲ್ಲಾ,ಮನಸ್ಸಿಲ್ಲಾ ಅಂದ್ರೆ ಏನು..? ಜನರ ಜುಟ್ಟು ನಿಮ್ಮ ಕೈಯಲ್ಲಿರ ಬೇಕಲ್ವಾ..? ಅಂತ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೆಗೌಡ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.