ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಮತ್ತು ಸಂಗೀತಾ ಜೋಡಿಯಾಗಿ ಹೈಲೆಟ್ ಆಗಿದ್ದರು. ಕಾರ್ತಿಕ್ (Karthik Mahesh) ಜೊತೆ ಬ್ರೇಕಪ್ ಮಾಡಿಕೊಂಡಿದ್ದ ಸಂಗೀತಾ ಇದೀಗ ಮುನಿಸು ಮರೆತು ಒಂದಾಗಿದ್ದಾರೆ. ಇದರ ಬೆನ್ನಲ್ಲೇ ಬಿಗ್ಬಾಸ್ ನೀಡಿದ ಒಂದು ಆಕ್ಟಿವಿಟಿಯಲ್ಲಿ ಮನೆಯ ಕೆಲ ಮಂದಿ ಪೀಕಲಾಟಕ್ಕೆ ಸಿಲುಕಿದರೆ ವಿನಯ್ ಮಾತ್ರ ಸಖತ್ ಮಜಾ ಮಾಡಿದರು. ವಿನಯ್ಗೆ ವಿಶೇಷ ಅಧಿಕಾರವೊಂದನ್ನು ಬಿಗ್ಬಾಸ್ ನೀಡಿದರು, ಆ ಅಧಿಕಾರವನ್ನು ಸರಿಯಾಗಿಯೇ ಬಳಸಿಕೊಂಡರು ವಿನಯ್.
ಸಂಕ್ರಾಂತಿ ಹಬ್ಬದಂದು ಹಸುವಿನ ಜೊತೆ ತಮ್ಮದೇ ಸ್ಟೈಲ್ನಲ್ಲಿ ಶುಭಾಶಯ ತಿಳಿಸಿದ ದರ್ಶನ್!
ಮನೆಯಲ್ಲಿ ಯಾವ ಪುರುಷ ಸದಸ್ಯ ಹೆಣ್ಣಿನ ವೇಷ ಧರಿಸಿ ಓಡಾಡಬೇಕು ಎಂದು ಕೇಳಿದ ಪ್ರಶ್ನೆಗೆ ಮನೆಯ ಬಹುತೇಕ ಸದಸ್ಯರು ವಿನಯ್ ಹೆಸರು ಹೇಳಿದರು. ಆದರೆ ವಿನಯ್, ಕಾರ್ತಿಕ್ ಹೆಸರು ಹೇಳಿದರು. ಇದರಿಂದಾಗಿ ಕಾರ್ತಿಕ್ ಹೆಣ್ಣಿನಂತೆ ವೇಷ ಧರಿಸಿ ಓಡಾಡುವಂತಾಯ್ತು. ಬಿಗ್ಬಾಸ್ನ ಮುಂದಿನ ಆದೇಶ ಬರುವವರೆಗೆ ಇವರೆಲ್ಲರೂ ಈಗ ನೀಡಿರುವ ಆದೇಶ ಪಾಲಿಸಬೇಕಾಗಿದೆ. ಇದೆಲ್ಲವೂ ಬಹುಮತದ ಆದೇಶ ಅಲ್ಲ ಬದಲಿಗೆ ವಿನಯ್ ನೀಡಿದ ಆದೇಶ. ಇದಕ್ಕೆ ಬದಲಾಗಿ ಅವರಿಗೆ ದಿನನಿತ್ಯವೂ ಒಳ್ಳೊಳ್ಳೆ ಊಟ ಸಹ ಸಿಕ್ಕಿದೆ ಎಂದು ಗೊತ್ತಾದಾಗ ಮನೆ ಸದಸ್ಯರ ಪ್ರತಿಕ್ರಿಯೆ ಹೇಗಿರುತ್ತದೆ ನೋಡಬೇಕಿದೆ.