ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿದ ಸಂಸದ ಅನಂತ್ಕುಮಾರ್ ಹೆಗಡೆಯವರ ( AnanthKumar Hegade) ಹೇಳಿಕೆ ವೈಯಕ್ತಿಕವಾಗಿ ಬೇಸರ ತರಿಸಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ (V.Somanna) ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಅನಂತ್ಕುಮಾರ್ ಹೆಗಡೆಯವರ ಹೇಳಿಕೆಯನ್ನು ಗಮನಿಸಿದ್ದೇನೆ.
ಅವರು ಪಕ್ಷದ ಹಿರಿಯ ನಾಯಕರು. ಅವರಿಗೆ ನಿಷ್ಕಲ್ಮಶ ಭಾವನೆ ಇದೆ. ಏನು ಬಾಯಿಗೆ ಬರುತ್ತೋ ಅದನ್ನು ಅವರು ನನ್ನ ಹಾಗೆ ಮಾತಾಡಿ ಬಿಡ್ತಾರೆ. ಹಿಂದೆ ಮುಂದೆ ನೋಡೋದೇ ಇಲ್ಲ. ಸಿದ್ದರಾಮಯ್ಯ ಕೇವಲ ಸಿದ್ದರಾಮಯ್ಯ ಅಲ್ಲ, ಈ ರಾಜ್ಯದ ಸಿಎಂ. ಸಿದ್ದರಾಮಯ್ಯ (Siddaramaiah) ಏನೋ ಮಾತಾಡ್ತಾರೆ ಎಂದು ನಾವ್ಯಾಕೆ ಚಿಕ್ಕವರಾಗಬೇಕು? ನಾವು ಚಿಕ್ಕವರಾಗೋದು ಬೇಡ ಎಂದಿದ್ದಾರೆ.