ಕೋಲಾರ: ಜಿಲ್ಲೆಯ ಅಬಕಾರಿ ಪೊಲೀಸರ ಮಹತ್ ಕಾರ್ಯಚರಣೆ ನಡೆಸಿದ್ದು ನಗರದ ಎರಡು ಕಡೆ 1,300 ಗ್ರಾಂ ಗಾಂಜಾ ವನ್ನು ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ
ಬೆಂಗಳೂರು ದಕ್ಷಿಣ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ರಮೇಶ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿದ್ದು ಅಪಾರ ಪ್ರಮಾಣದ ಗಾಂಜಾ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕೋಲಾರ ತಾಲ್ಲೂಕಿನ ಶ್ರೀನಿವಾಸಪುರ ಕೋಲಾರ ರಸ್ತೆಯ ಮಹರ್ಷಿ ಸ್ಕೂಲ್ ಬಳಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ 800 ಗ್ರಾಂ ಹೂ ಮತ್ತು ಬೀಜಗಳಿಂದ ಕೂಡಿದ ಒಣ ಗಾಂಜಾ ಸೊಪ್ಪನ್ನು ಹೊಂದಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದ್ದು ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ .
ಹಾಗೆ ಕೋಲಾರದ ಮೂರಂಡಹಳ್ಳಿ ಕ್ರಾಸ್ ಬಳಿ ಕೂಡ ಪೊಲೀಸರು ದಾಳಿ ನಡೆಸಿದ್ದು ಸುಮಾರು 400 ಗ್ರಾಂ ಹೂ ಮತ್ತು ಬೀಜದಿಂದ ಕೂಡಿರುವ ಒಣ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಹೊಂದಿರುವುದನ್ನು ಪತ್ತೆ ಹಚ್ಚಿ ಆರೋಪಿಗಳನ್ನ ಬಂಧಿಸಲಾಗಿದೆ.
ಬಂಧಿತರಿಂದ ಕೃತ್ತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳು, ಜಪ್ಪಿ ಮಾಡಲಾಗಿದ್ದು ಹಾಗೆ ಮೂರು ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ವೇಳೆ ಸಿಬ್ಬಂದಿಗಳಾದ ಸುಬ್ರಮಣಿ,ಅಂಬರೀಶ,ಅಶೋಕ್ ಕುಮಾರ್, ಜಯರಾಂ ರೆಡ್ಡಿ ಹಾಜರಿದ್ದರು.