ಬೆಂಗಳೂರು: ಅನಧಿಕೃತ ಶಾಲೆಗಳನ್ನ ಮುಚ್ಚುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು ಈಗ ಶಿಕ್ಷಣ ಇಲಾಖೆಯ ಸುತ್ತೊಲೆಯ ಬಗ್ಗೆ ಪರ-ವಿರೋಧದ ಚರ್ಚೆ ಶುರುವಾಗಿದೆ.
ಕ್ಯಾಮ್ಸ್, ರುಪ್ಸಾದಿಂದ ಎದುರಾಯ್ತು ಭಾರೀ ವಿರೋಧ ವ್ಯಕ್ತವಾಗಿದ್ದು ಪ್ರಭಾವಿಗಳ ಒತ್ತಡಕ್ಕೆ ಮಣಿದು ಸುತ್ತೋಲೆ ಹೊರಡಿಸಲಾಗಿದೆಂದು ಆಕ್ರೋಶ ಕನ್ನಡ ಹಾಗೂ ಬಜೆಟ್ ಶಾಲೆಗಳನ್ನು ಮುಚ್ಚಿ ಕಾರ್ಪೋರೇಟ್ ಶಾಲೆಗಳಿಗೆ ಮಣೆ ಹಾಕ್ತಿದ್ದಾರೆಂದು ಕಿಡಿ ಬಡ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಕೆಲ ಶಾಲೆಗಳುಗ್ರಾಮೀಣ ಭಾಗದ, ನಗರದ ಕೊಳಚೆ ಪ್ರದೇಶಗಲ್ಲಿರುವ ಬಜೆಟ್ ಶಾಲೆಗಳನ್ನು ಗುರಿಯಾಗಿಸಿ ಸಾವಿರಾರು ಶಾಲೆಗಳನ್ನು ಮುಚ್ಚಲು ಈ ರೀತಿಯ ಆದೇಶ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಬೆಂಗಳೂರನಲ್ಲಿ ಅನೇಕ ವರ್ಷಗಳಿಂದ ಅನಧಿಕೃತ ಬೃಹತ್ ಶಾಲೆಗಳಿವೆ ಮಾನ್ಯತೆ ಇಲ್ಲದ ಅನೇಕ ಶಾಲೆಗಳು ಬಹಿರಂಗವಾಗಿ ನಡೆಯುತ್ತಿವೆ ಈ ಶಾಲೆಗಳ ಮಾಲೀಕರು ಪ್ರಭಾವಿ ರಾಜಕಾರಣಿಗಳಾಗಿರೋದ್ರಿಂದ ಅಂತಹ ಶಾಲೆಗಳ ಮೇಲೆ ಇಲಾಖೆ ಕ್ರಮ ಗೊಂಡಿಲ್ಲವೆಂದು ಆಕ್ರೋಶ ಸಣ್ಣ ಪುಟ್ಟ ಬಜೆಟ್ ಶಾಲೆಗಳನ್ನು ಅನಧಿಕೃತ ಅನ್ನೋದರ ಹಿಂದೆ ಕೆಲ ಪ್ರಭಾವಿಗಳ ಕೈವಾಡ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವ್ಯಾವ ಶಾಲೆ ಅನಧಿಕೃತ?
1.ಶಾಲಾ ನೋಂದಣಿ, ಅನುಮತಿ ಪಡೆಯದೆ ನಡೆಯುತ್ತಿರುವ ಶಾಲೆ
2.ನೋಂದಣಿ ಇಲ್ಲದೆ ಉನ್ನತ್ತೀಕರಿಸಿದ ಶಾಲೆಗಳು
3.ರಾಜ್ಯ ಪಠ್ಯಕ್ರಮ ಬೋಧಿಸಲು ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧನೆ
4.ಅನಧಿಕೃತವಾಗಿ ಹೆಚ್ಚುವರಿ ವಿಭಾಗಗಳನ್ನ ಹೊಂದಿರುವ ಶಾಲೆ
5.ಇಲಾಖೆಯ ಪೂರ್ವಾನುಮತಿ ಇಲ್ಲದೆ ಸ್ಥಳಾಂತರ /ಹಸ್ತಾಂತರಗೊಂಡಿರೋದು
6.ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಿದ ನಂತರ ಅದೇ ಕಟ್ಟಡದಲ್ಲಿ ರಾಜ್ಯ ಪಠ್ಯಕ್ರಮ ಬೋಧನೆ
7.ರಾಜ್ಯ ಪಠ್ಯ ಕ್ರಮದಲ್ಲಿ ಅನುಮತಿ ಪಡೆದು ಇತರೆ ಪಠ್ಯ ಕ್ರಮ ಅವಳಡಿಸಿರೋದು