ಬೆಂಗಳೂರು: ನಾಡಿನಾದ್ಯಂತ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಂಭ್ರಮ ಜೋರಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ. ಅಗತ್ಯ ವಸ್ತುಗಳ ಖರೀದಿಗೆ ಜನ ಮಾರುಕಟ್ಟೆಗೆ ದಾಂಗುಡಿ ಇಡುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ರಾಸುಗಳಿಂದ ಕಿಚ್ಚು ಹಾಯಿಸಲು ಭರ್ಜರಿ ತಯಾರಿ ನಡೆಸಿದ್ದಾರೆ
ಇನ್ನೂ ಸ್ನೇಹಿತರು, ಬಂಧು-ಬಾಂಧವರು ಪರಸ್ಪರ ಶುಭಕೋರುತ್ತಿದ್ದಾರೆ ಹಾಗೆ ರಾಜ್ಯ ನಾಯಕರು ಜನರಿಗೆ ಸಂದೇಶ ಕಳುಹಿಸಿದ್ದಾರೆ.
https://x.com/DKShivakumar/status/1746706266922107197?t=65hN8l6G4bvcQGObXhoGvA&s=08
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾರೈಸಿದ್ದಾರೆ.. ಈ ಬಾರಿಯ ಸುಗ್ಗಿ ಹಬ್ಬವು ನಮ್ಮ ನಾಡಿಗೆ ಹಾಗೂ ರೈತರ ಬದುಕಲ್ಲಿ ಸುಖ, ಶಾಂತಿ, ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ.
https://x.com/hd_kumaraswamy/status/1746719742340284548?t=YM2YNfi1PBW2V4kJ8rJWVw&s=08
ಹೆಚ್.ಡಿ ಕುಮಾರಸ್ವಾಮಿ
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ತೇಜೋಮಯನಾದ ಸೂರ್ಯ ದೇವನು ಪಥ ಬದಲಿಸುವ ಈ ಉತ್ತರಾಯಣ ಪುಣ್ಯಕಾಲವು ಎಲ್ಲರ ಬದುಕಿನಲ್ಲೂ ಸುಖ-ಶಾಂತಿ, ನೆಮ್ಮದಿ-ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.
https://x.com/BSBommai/status/1746704038090166316?t=buebA0fpiK7ue5a2HvwW-Q&s=08
ಬಸವರಾಜ ಬೊಮ್ಮಾಯಿ:
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ, ಎಲ್ಲರಿಗೂ ಶುಭವಾಗಲಿ.
ಬಿ.ಎಸ್ ಯಡಿಯೂರಪ್ಪ:
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಉತ್ತರಾಯಣ ಪರ್ವಕಾಲವು ಎಲ್ಲರ ಬದುಕಿನಲ್ಲೂ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಗಳ ಹೊಂಬೆಳಕನ್ನು ಹರಡಲಿ ಎಂದು ಹಾರೈಸುತ್ತೇನೆ.
ಬಿ.ವೈ ವಿಜಯೇಂದ್ರ:
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ರೈತ ಕಾಯಕದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಸುಗ್ಗಿಯ ಹಬ್ಬವು ನಾಡಿನೆಲ್ಲೆಡೆ ನೆಮ್ಮದಿ ನೆಲೆಸಿ, ಎಲ್ಲರ ಬದುಕಿನಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಹೊತ್ತು ತರಲೆಂದು ಶುಭ ಹಾರೈಸುತ್ತೇನೆ.