ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ನಾಡಿನಲ್ಲೇ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ.
ನಗರದಲ್ಲಿ ವರ್ಷದ ಮೊದಲ ಹಬ್ಬದ ಸಂಭ್ರಮದಲ್ಲಿ ಸಿಟಿ ಮಂದಿ ಮುಳುಗಿದ್ದು, ನಗರದ ಕೆಆರ್ ಮಾರ್ಕೆಟ್ ನಲ್ಲಿ ಹಬ್ಬದ ಖರೀದಿಯಲ್ಲಿ ಜನತೆ ಮುಗಿಬಿದ್ದಿದ್ದಾರೆ. ಮಾರ್ಕೆಟ್ ನಲ್ಲಿ ಎಲ್ಲಿ ನೋಡಿದರೂ ಜನತೆ ತುಂಬಿ ತುಳುಕುತ್ತಿದ್ದಾರೆ. ಬೆಳಗ್ಗೆಯಿಂದಲೇ ಹಬ್ಬದ ಖರೀದಿಗೆ ಬೇಕಾಗುವ ವಸ್ತುಗಳು ಖರೀದಿಗೆ ಜನ ಬರುತ್ತಿದ್ದು, ದರ ಏರಿಕೆ ನಡುವೆಯೂ ಹಬ್ಬದ ಖರೀದಿ ಭರಾಟೆ ಜೋರುಯಾಗಿದೆ.
ಕೆಆರ್ ಮಾರ್ಕೆಟ್ ನಲ್ಲಿ ಖರೀದಿಗೆ ಜನತೆ ಮುಗಿಬಿದ್ದಿದ್ದು, ಕೆಆರ್ ಮಾರ್ಕೆಟ್ ಜಂಗುಳಿಯಿಂದ ತುಳುಕಿ ತುಂಬುತ್ತಿದೆ.