ಮುಂಬೈ:- ಹೆಂಡತಿಗೆ ಕುಕ್ಕಿಂಗ್ ಬರಲ್ಲ ಎಂದು ಆಪಾದಿಸುವುದು ಕ್ರೌರ್ಯ ಅಲ್ಲ ಎಂದು ಇಲ್ಲಿನ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಹಿಳೆ ಅಡುಗೆ ಬರಲ್ಲ ಎಂದು ಆಕೆಯ ಗಂಡ ಅಥವಾ ಸಂಬಂಧಿಕರು ಹೇಳುವುದನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಸಾಂಗ್ಲಿ ನಿವಾಸಿಯಾಗಿರುವ ಅರ್ಜಿದಾರರ ದೂರನ್ನು ಪರಿಶೀಲಿಸುವಾಗ ಮುಂಬೈ ಹೈಕೋರ್ಟ್ ಈ ರೀತಿ ತಿಳಿಸಿತು. ಮಹಿಳೆಯೊಬ್ಬರು, ಗಂಡನ ಸಂಬಂಧಿಕರು ಅಡುಗೆ ಕೆಲಸ ಬರುವುದಿಲ್ಲವೆಂದು ಹೀಯಾಳಿಸುತ್ತಾರೆಂದು ದೂರು ಸಲ್ಲಿಸಿದ್ದರು.
ಆದ್ರೆ ಪೀಠವು ಈ ವಿಷಯವನ್ನು ಕ್ರೌರ್ಯವೆಂದು ಪರಿಗಣಿಸಲಾಗುವುದಿಲ್ಲವೆಂದು ಹೇಳಿ ಅರ್ಜಿಯನ್ನು ರದ್ದುಗೊಳಿಸಿತು.
ತನ್ನ ಸೋದರ ಮಾವ ಸೇರಿದಂತೆ ಅತ್ತೆಯಂದಿರು ತನಗೆ ಅಡುಗೆ ಗೊತ್ತಿಲ್ಲ, ಪೋಷಕರು ತನಗೆ ಏನನ್ನೂ ಕಲಿಸಿಲ್ಲ ಎಂದು ಹೀಯಾಳಿಸಿ ಅವಮಾನಿಸುತ್ತಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ಘಟನೆಯನ್ನು ‘ಕ್ರೌರ್ಯ’ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.