ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಕೆ ಎಚ್ ಡಿ ಸಿ ಕಾಲೋನಿಯಲ್ಲಿರುವ ಶ್ರೀ ಗುರು ಬಸವ ಮನೆಯಲ್ಲಿ ಮಹಾಮನೆ ಸೇವಾ ಸಮಿತಿಯವರು ಪ್ರತಿ ವರ್ಷದಂತೆ ಈ ವರ್ಷವೂ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಸಹಜ ಶಿವಯೋಗ ಮಂಗಲ ಸಮಾರಂಭ ಕಾರ್ಯಕ್ರಮ ನಡೆಯಿತು.
ಅನೇಕ ರೋಗಗಳಿಂದ ಮುಕ್ತಿ ಪಡೆಯಲು ಎಲ್ಲರೂ ಲಿಂಗ ಪೂಜೆಯನ್ನು ಮಾಡಬೇಕು. ಎಲ್ಲರೂ ಅಂಗದ ಮೇಲೆ ಲಿಂಗ ಧರಿಸಿ ಲಿಂಗಧಾರಿಗಳಾಗಬೆಕೆಂದು ರಬಕವಿ ಬ್ರಹ್ಮಾನಂದ ಆಶ್ರಮದ ಪರಮಪೂಜ್ಯ ಶ್ರೀ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ಹೇಳಿದರು.
ಕಾಯಕದ ಜೊತೆಗೆ ಸ್ವಲ್ಪ ಸಮಯ ಲಿಂಗ ಪೂಜೆಗೆ ಮೀಸಲಿಡಬೇಕು ಚಂಚಲವಾದ ಮನಸ್ಸನ್ನು ನಿಗ್ರಹಿಸಲು ಹಾಗೂ ತಾಯಂದಿರಿಗೆ ಸಹನ ಗುಣವನ್ನು ಬೆಳೆಸಿಕೊಳ್ಳಲು ಲಿಂಗ ಪೂಜೆ ಬಹಳಷ್ಟು ಅವಶ್ಯವಾಗಿದೆ. ಮಹಾಮನೆಯ ಅನೇಕ ಸದಸ್ಯರು ಲಿಂಗ ಪೂಜೆಯನ್ನು ಮಾಡುವುದರಿಂದಲೇ ಒಳ್ಳೆಯ ಸ್ಥಾನದಲ್ಲಿರಲು ಸಾಧ್ಯವಾಗಿದೆ.
ಮಹಾಮನೆಯ ಸದಸ್ಯರನ್ನು ಮನದುಂಬಿ ಹರಸಿದರು ಪೂರ್ವಾಶ್ರಮದಲ್ಲಿ ರಾಜು ಚನಾಳ ಅವರು ಲಿಂಗ ಪೂಜೆಯನ್ನು ಮಾಡಿರುವುದರಿಂದಲೇ ಇಂದು ಅಂಬಿಗರ ಚೌಡಯ್ಯನವರ ಪೀಠಕ್ಕೆ ಜಗದ್ಗುರುಗಳಾಗಿದ್ದಾರೆ. ಸುನೀಲ ಕೊಣ್ಣೂರ. ಮಹಾಂತ ಶರಣರು. ಬಸವಂತಪ್ಪ ಬಾಣಕಾರ. ಸಂಜು ಬರಗಲ. ಅಶೋಕ್ ಜೋರೆ. ಮಹೇಶ್ ಬಂಡಿಗಣಿ ಡಾ|| ಶಂಕರ ವಸ್ತ್ರದ. ಹುಚ್ಚಪ್ಪ ಹೋಳಗಿ ರಂಗಗೊಂದಕರ ಮಲ್ಲಪ್ಪ ಚಿಪ್ಪಾಡಿ ಶಿವಾನಂದ ಕೊಳಕಿ. ಶಿವಲೀಲಾ ಬರಗಲ್. ಭಾರತಿ ಕಳ್ಳಿಗುದ್ದಿ ಗೌರವ ಮಿರ್ಜಿ. ರವಿ ಗೆದ್ದಪ್ಪನವರ ಈರಣ್ಣ ಬಾಣಕಾರ ಇನ್ನು ಅನೇಕ ಶರಣ ತಂದೆ ತಾಯಿಂದಿರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ