ಬಿಗ್ ಬಾಸ್ ಮನೆಯಲ್ಲಿ ನವಗ್ರಹಗಳ ಬಗ್ಗೆ ಚರ್ಚೆ ಹಾಗೂ ಈ ಮನೆಯ ಶನಿ ಯಾರು? ಎಂಬ ಪ್ರಶ್ನೆಯನ್ನ ಕಾರ್ತಿಕ್ ಕೇಳಿದ್ರೋ ಆಗ್ಲಿಂದ ಅವರ ಮೇಲೆ ಶನಿಯ ವಕ್ರದೃಷ್ಟಿ ಬಿದ್ದುಬಿಟ್ಟಿದೆ. ಕಳೆದ ವಾರಾಂತ್ಯದಲ್ಲಿ ಶನಿ ಟಾಪಿಕ್ ಯೆಸ್/ ನೋ ರೌಂಡ್ನಲ್ಲಿ ಬಂದಿತ್ತು. ಈ ವೀಕೆಂಡ್ನಲ್ಲಿ ಅದೇ ಟಾಪಿಕ್ ಮತ್ತೆ ಚರ್ಚೆಯಾಗಿದೆ. ತನ್ನ ತಪ್ಪನ್ನು ವರ್ತೂರು ಸಂತೋಷ್ ತಲೆಗೆ ಕಟ್ಟಲು ಹೋದ ಕಾರ್ತಿಕ್ಗೆ ಕಿಚ್ಚ ಕಿವಿಹಿಂಡಿದ್ದಾರೆ.
ಈ ಮನೆಯ ಶನಿ ಸಂಗೀತಾ (Sangeetha Sringeri) ಅಂತ ಹೇಳಿದ್ದು ವರ್ತೂರು ಸಂತೋಷ್. ನಾನಲ್ಲ ಎಂದು ಕಾರ್ತಿಕ್ (Karthik Mahesh) ವಾದಿಸಿದ್ದರು. ಸರಿಯಾಗಿ ನೆನಪಿಲ್ಲ ಅಂತಲೂ ಹೇಳಿದ್ದರು. ಹೀಗಿರುವಾಗಲೇ, ನೀವು ಹೇಳಿದ್ರಿ ಕಾರ್ತಿಕ್ ಅಂತ ಸುದೀಪ್ ನೇರವಾಗಿ ಮಾತಿನ ಬಾಣ ಬೀಸಿದರು.
Salt in Vastu: ನಿಮ್ಮ ಕುಟುಂಬದಲ್ಲಿ ಆಗ್ತಾ ಇರುವ ಎಲ್ಲಾ ಸಮಸ್ಯೆಗಳಿಗೆ ಉಪ್ಪಿನಿಂದ ಪರಿಹಾರವಿದೆ!
ಕಿಚ್ಚನ ಪಂಚಾಯಿತಿಯಲ್ಲಿ ಶನಿ ಟಾಪಿಕ್ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಸುದೀಪ್, ವರ್ತೂರು ಅವರೇ.. ಕಾರ್ತಿಕ್ ಅವರನ್ನ ನಾಮಿನೇಟ್ ಮಾಡ್ತೀರಿ. ಅದಕ್ಕೆ ನೀವು ಕೊಟ್ಟ ಕಾರಣ ಯಾರಿಗೂ ಅರ್ಥ ಆಗುತ್ತಿಲ್ಲ. ವಿವರಿಸಿ ಎಂದು ಸುದೀಪ್ ಕೇಳುತ್ತಾರೆ. ಆಗ ಕಾರ್ತಿಕ್, ಸಂಗೀತಾಗೆ ಶನಿ ಎಂದಿರುವ ಬಗ್ಗೆ ವರ್ತೂರು ಸಂತೋಷ್ (Varthur Santhosh) ಕ್ಲ್ಯಾರಿಟಿ ಕೊಡುತ್ತಾರೆ. ಆಗ ಕಾರ್ತಿಕ್ ತಾವು ಹೇಳಲೇ ಇಲ್ಲ ಅಂತ ವಾದಿಸುತ್ತಾರೆ.
ನೀವು ಹೇಳಿದ್ರಿ ಕಾರ್ತಿಕ್. ಕೆಲವು ಬಾರಿ ಮರೆತಿರಬಹುದು. ವರ್ತೂರು ಸಂತೋಷ್ ಅವರಲ್ಲಿ ಒಳ್ಳೆಯ ಸ್ಪರ್ಧಿ ಕೂಡ ಇದ್ದಾರೆ. ಅವರ ಬಗ್ಗೆ ತಮಾಷೆ ಮಾಡಬಹುದು. ಆದರೆ, ಅವರಲ್ಲಿ ಮುಗ್ಧತೆ ಇದೆ. ಮಾಡಿದ್ದನ್ನ ಒಪ್ಪಿಕೊಳ್ಳುವ ಮುಗ್ಧತೆ ಅವರಲ್ಲಿದೆ. ಇವತ್ತು ಅವರ ಮೇಲೆ ಅಪವಾದ ಹಾಕುತ್ತಿದ್ದರೆ, ನಾನು ಸುಮ್ಮನೆ ಇರೋಕೆ ಆಗಲ್ಲ.
ಸಾಮಾನ್ಯವಾಗಿ ನಾನು ಯಾವುದಕ್ಕೂ ಇಂಟರ್ಫಿಯರ್ ಆಗಲ್ಲ. ನೀವು ಹೇಳಿದ್ರಿ, ಹೇಳಿಲ್ಲ ಅಂತ ನಾನು ಮಾತಾಡಿಲ್ಲ. ಇವತ್ತು ಹೇಳ್ತಿದ್ದೀನಿ. ಯಾಕಂದ್ರೆ, ಆ ಮನುಷ್ಯನಲ್ಲಿ ಇನ್ನೊಸೆನ್ಸ್ ಇದೆ. ಅದನ್ನ ಅಪ್ರೀಷಿಯೇಟ್ ಮಾಡ್ತೀನಿ. ಕಿಚನ್ನಲ್ಲಿ ನೀವು ಆ ಮಾತನ್ನ ಹೇಳಿದ್ದು ಸತ್ಯ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ.