ಬೆಂಗಳೂರು: ರಾಮಮಂದಿರ ಉದ್ಘಾಟನೆ ಹೋಗುವ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವಿನ ವಾಕ್ಸಮರ ಮುಂದುವರೆದಿದೆ.ಅಯೋಧ್ಯೆಗೆ ಹೋಗಿ ಏಕೆ ಪೂಜೆ ಮಾಡಬೇಕೆಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ, ಜನವರಿ 22ರ ನಂತರ ನಾನು ಹೋಗ್ತೀನಿ ಎಂದು ಇದೀಗ ಯೂ ಟರ್ನ್ ಹೊಡೆದಿದ್ದಾರೆ.ಸಿಎಂ ಸಿದ್ದರಾಮಯ್ಯಗೆ ಈಗಲಾದರೂ ಬುದ್ಧಿ ಬಂತಲ್ವಾ ಎಂದು ಬಿಜೆಪಿ ನಾಯಕರು ವ್ಯಂಗ್ಯಮಾಡಿದ್ದಾರೆ.
ಯೆಸ್,ಅಯೋಧ್ಯೆಗೆ ಏಕೆ ಹೋಗಿ ರಾಮನಿಗೆ ಪೂಜೆ ಮಾಡಬೇಕು.ನಾನು ಇಲ್ಲಿರುವ ರಾಮನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ತೀನಿ ಎಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಯೂ ಟರ್ನ್ ಹೊಡೆದಿದ್ದಾರೆ.ಜನವರಿ 22 ಉದ್ಘಾಟನೆ ದಿನ ನಾನು ಹೋಗಲ್ಲ.ಬಿಜೆಪಿಯವರು ಇದನ್ನ ರಾಜಕೀಯ ಕಾರ್ಯಕ್ರಮ ಮಾಡಿಕೊಂಡಿದ್ದಾರೆ.ನಾನು 22ರ ನಂತರ ಅಯೋಧ್ಯೆಗೆ ಭೇಟಿ ನೀಡ್ತೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.