ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರೂಡೋರನ್ನು ಕೆರಿಬಿಯನ್ ದ್ವೀಪಕ್ಕೆ ಕರೆತಂದ ಮಿಲಿಟರಿ ವಿಮಾನವು ಈ ವಾರ ಜಮೈಕಾಕ್ಕೆ ಕೆನಡಾ ಸಶಸ್ತ್ರ ಪಡೆಗಳು 2ನೇ ವಿಮಾನ ಕಳಿಸಬೇಕಾಯ್ತು ಎಂದು ಸಿಬಿಸಿ ನ್ಯೂಸ್ ವರದಿ ಮಾಡಿದೆ. 4 ತಿಂಗಳೊಳಗೆ 2ನೇ ಬಾರಿಗೆ ಯಾಂತ್ರಿಕ ಸಮಸ್ಯೆಗಳಿಂದಾಗಿ ಟ್ರೂಡೋವನ್ನು ಸಾಗಿಸುವ ವಿಮಾನ ಹಾರಾಟ ನಡೆಸಲು ಸಾಧ್ಯವಾಗಲಿಲ್ಲ.
ಕೆನಡಾದ ಪ್ರಧಾನಿ ಕುಟುಂಬ ವಿಹಾರಕ್ಕಾಗಿ ಜಮೈಕಾಗೆ ಹೋಗಿದ್ದರು, ಅಲ್ಲಿ ಅವರು ತಮ್ಮ ಕುಟುಂಬದೊಂದಿಗೆ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದರು, ಆದರೆ ಗುರುವಾರ, ಅವರು ಹಿಂದಿರುಗುವಾಗ, ಅವರ ವಿಮಾನವು ಕೆಟ್ಟನಿಂತಿತ್ತು, ಇದರಿಂದಾಗಿ ಅವರು ಒಂದು ದಿನ ಅಲ್ಲೇ ಉಳಿಯಬೇಕಾಯಿತು.
ರಾಷ್ಟ್ರೀಯ ರಕ್ಷಣಾ ಇಲಾಖೆಯು ಜಮೈಕಾಕ್ಕೆ ಎರಡನೇ ವಿಮಾನವನ್ನು ಕಳುಹಿಸಿದೆ ಎಂದು ಕೆನಡಾದ ಔಟ್ಲೆಟ್ CBC ನ್ಯೂಸ್ ಶುಕ್ರವಾರ ವರದಿ ಮಾಡಿದೆ. ಕೆನಡಾದ ವಾರ್ತಾಪತ್ರಿಕೆ ನ್ಯಾಷನಲ್ ಪೋಸ್ಟ್ ಈ ಹಿಂದೆ ಟ್ರೂಡೊ ತನ್ನ ರಜೆಯ ಪ್ರಯಾಣಕ್ಕೆ ತಾನೇ ಪಾವತಿಸುತ್ತಿರುವುದಾಗಿ ಹೇಳಿದ್ದಾಗಿ ವರದಿ ಮಾಡಿತ್ತು.