ಬೆಂಗಳೂರು:- ಮಕರ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಿಂದ ಆಚರಣೆ ಮಾಡಲು ಸಿಟಿ ಮಂದಿ ತಯಾರಿ ಶುರು ಮಾಡಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬೇಕಾದ ಹೂ, ಹಣ್ಣು, ತರಕಾರಿಗಳನ್ನ ಖರೀದಿ ಮಾಡಲು ಕೆ.ಆರ್. ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ.
ಹೀಗಾಗಿ ಕೆ.ಆರ್.ಮಾರುಕಟ್ಟೆಯ (KR Market) ಸುತ್ತ – ಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.
ಈ ಬಾರಿ ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಬೆಲೆಗಳನ್ನ ಕೇಳಿಯೇ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ತರಕಾರಿಗಳ ಬೆಲೆ 10 ರಿಂದ 20 ರೂಪಾಯಿ ಜಾಸ್ತಿಯಾಗಿದ್ರೆ, ಹೂವಿನ ಬೆಲೆ ಗಗನಕ್ಕೆ ಏರಿದೆ. ಈ ಮಧ್ಯೆ ಹಣ್ಣುಗಳ ಬೆಲೆಯು ಏರಿಕೆಯಾಗಿದ್ದು, ವ್ಯಾಪಾರಸ್ತರು ಲಾಭದ ನೀರಿಕ್ಷೆಯಲ್ಲಿದ್ದಾರೆ. ಹಾಗಿದ್ರೆ ಸಧ್ಯ ತರಕಾರಿಗಳ ಬೆಲೆ ಕಳೆದ ವಾರ ಎಷ್ಟಿತ್ತು. ಇಂದು ಎಷ್ಟಿದೆ ಅಂತ ನೋಡುವುದಾದರೆ.
ಕ್ಯಾರೆಟ್; ಇಂದಿನ ಬೆಲೆ-60 kg, ಹಿಂದಿನ ಬೆಲೆ-60 ರೂ.
ಬಟಾಣಿ: ಇಂದಿನ ಬೆಲೆ – 40 kg, ಹಿಂದಿನ ಬೆಲೆ – 60ರೂ.
ಅವರೆಕಾಯಿ: ಇಂದಿನ ಬೆಲೆ- 80 kg, ಹಿಂದಿನ ಬೆಲೆ- 70ರೂ.
ಬೀನ್ಸ್: ಇಂದಿನ ಬೆಲೆ – 60 kg, ಹಿಂದಿನ ಬೆಲೆ – 40ರೂ.
ಗೆಣಸು: ಇಂದಿನ ಬೆಲೆ – 40 kg, ಹಿಂದಿನ ಬೆಲೆ – 30ರೂ.
ಹಸಿರುಮೆಣಸಿನಕಾಯಿ: ಇಂದಿನ ಬೆಲೆ – 60 kg, ಹಿಂದಿನ ಬೆಲೆ – 80 ರೂ,
ಈರುಳ್ಳಿ: ಇಂದಿನ ಬೆಲೆ – 30kg, ಹಿಂದಿನ ಬೆಲೆ – 20 kg ರೂ,
ಬೆಳ್ಳುಳ್ಳಿ: ಇಂದಿನ ಬೆಲೆ – 280 kg, ಹಿಂದಿನ ಬೆಲೆ – 260ರೂ.
ಶುಂಠಿ: ಇಂದಿನ ಬೆಲೆ 120 kg, ಹಿಂದಿನ ಬೆಲೆ – 160ರೂ.
ಟೋಮಾಟೋ ಇಂದಿನ ಬೆಲೆ 25, ಹಿಂದಿನ ಬೆಲೆ 20ರೂ.
ತೊಂಡೆಕಾಯಿ: ಇಂದಿನ ಬೆಲೆ – 60 kg, ಹಿಂದಿನ ಬೆಲೆ – 40ರೂ.
ಬದನೆಕಾಯಿ: ಇಂದಿನ ಬೆಲೆ – 50 kg, ಹಿಂದಿನ ಬೆಲೆ – 30 kgರೂ.
ಹೀರೇಕಾಯಿ: ಇಂದಿನ ಬೆಲೆ – 40 kg, ಹಿಂದಿನ ಬೆಲೆ- 30 kg ರೂ.
ಇನ್ನು ಇದು ತರಕಾರಿ ಬೆಲೆಯ ಕಥೆಯಾದ್ರೆ, ಹೂಗಳ ಬೆಲೆಯಂತು ಕೇಳುವ ಹಾಗೇ ಇಲ್ಲ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹೂಗಳು ಮಾರ್ಕೆಟ್ ಗೆ ಬರುವುದು ಕಡಿಮೆ. ಇದೀಗಾ ಜನರಿಂದ ಹೂಗಳಿಂದ ಬೇಡಿಕೆ ಇದೆ. ಹೂಗಳ ಬೆಲೆ ಏರಿಕೆಯಾಗಿದೆ ಅಂತ ಹೂವಿನ ವ್ಯಾಪಾರಸ್ತರು ಹೇಳಿದ್ದಾರೆ.
ಸಂಪಿಗೆ: ಇಂದಿನ ಬೆಲೆ – 400 kg, ಹಿಂದಿನ ಬೆಲೆ – 250ರೂ.
ಚೆಂಡು ಹೂ: ಇಂದಿನ ಬೆಲೆ50 kg, ಹಿಂದಿನ ಬೆಲೆ 40ರೂ.
ಸೇವಂತಿಗೆ: ಇಂದಿನ ಬೆಲೆ 150 kg, ಹಿಂದಿನ ಬೆಲೆ – 100 ರೂ.
ಕಾಕಡ: ಇಂದಿನ ಬೆಲೆ 500 kg, ಹಿಂದಿನ ಬೆಲೆ – 300 kg
ಕನಕಾಂಬರ: ಇಂದಿನ ಬೆಲೆ 600 kg, ಹಿಂದಿನ ಬೆಲೆ – 300 kg
ಗಣಿಗಲು ಹೂ: ಇಂದಿನ ಬೆಲೆ 300 kg, ಹಿಂದಿನ ಬೆಲೆ – 150
ತುಳುಸಿ ಮಾರು: ಇಂದಿನ ಬೆಲೆ50, ಹಿಂದಿನ ಬೆಲೆ ಮಾರು – 20
ದವನ: ಇಂದಿನ ಬೆಲೆ50 ರೂ ಕಟ್, ಹಿಂದಿನ ಬೆಲೆ – 20
ಕಮಲ ಜೋಡಿ: ಇಂದಿನ ಬೆಲೆ 40 ರೂ
ಮಲ್ಲಿಗೆ: ಇಂದಿನ ಬೆಲೆ1600 kg, ಹಿಂದಿನ ಬೆಲೆ – 1000
ಗುಲಾಬಿ: ಇಂದಿನ ಬೆಲೆ -240 kg, ಹಿಂದಿನ ಬೆಲೆ – 120