ಕಲಬುರಗಿ:- ರಾಮ ಮಂದಿರ ಉದ್ಘಾಟನೆ ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ರೆಡಿಯಾಗಿರುವ ಕಲಬುರಗಿ ಲಕ್ಷಾಂತರ ರಾಮ ಭಕ್ತರಿಗೆ ಟ್ರೇನ್ ಇಲ್ಲ.ಹೀಗಾಗಿ ಅನುಕೂಲ ಮಾಡಿ ಅಂತ ಸಂಸದ ಉಮೇಶ್ ಜಾಧವ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ..
ಈಗಾಗಲೇ ಸೊಲ್ಲಾಪುರದಿಂದ ಅಯೋಧ್ಯೆಗೆ ವಿಶೇಷ ರೈಲು ಹೊರಡಲು ಸಿದ್ಧವಾಗಿದೆ.ಜನೆವರಿ 19 ರಂದು ಹೊರಡುವ ವಿಶೇಷ ರೈಲು ಕಲಬುರಗಿಯಿಂದ ಶುರುವಾಗಲಿ ಅಂತ ಪತ್ರದಲ್ಲಿ ಉಲ್ಲೇಖಿಸಲಾಗಿದೆ..ಜಾಧವ್ ಬರೆದ ಪತ್ರಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿ ವಿಶೇಷ ರೈಲನ್ನ ಕಲಬುರಗಿವರೆಗೆ ವಿಸ್ತರಿಸುತ್ತಾ ಕಾದು ನೋಡಬೇಕಿದೆ..