ಬಳ್ಳಾರಿ:– ಮಲಗಿದ್ದ ವೇಳೆ ಲಾರಿ ಹರಿದು ಇಬ್ಬರು ಕುರಿಗಾಯಿಗಳು ದಾರುಣ ಸಾವನ್ನಪ್ಪಿದ ಘಟನೆ ಬಳ್ಳಾರಿ ನಗರದ ಏತ್ತಿನಬೂದಿಹಾಳು ಹತ್ತಿರದ ಬೆಂಚಿಕೊಟ್ಟಲ ಗ್ರಾಮದ ಬಳಿ ಜರುಗಿದೆ.
ಕಬ್ಬಿನ ಗದ್ದೆಲ್ಲಿ ಲಾರಿ ಹರಿದು ಇಬ್ಬರು ಕುರಿಗಾರರು ಸಾವನ್ನಪ್ಪಿದ್ದಾರೆ. ಕಬ್ಬುನ್ನು ಸಾಗಾಟ ಮಾಡುವ ಲಾರಿ ಲೋಡ್ ಮಾಡುವ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ. ಲಾರಿಯ ಚಕ್ರದ ಬಳಿ ಕುರಿಗಾಯಿಗಳು ಮಲಗಿದ್ದರು ಎನ್ನಲಾಗಿದೆ.
ಚಿತ್ರದುರ್ಗದ ಮೊಳಕಾಲ್ಮುರು ತಾಲ್ಲೂಕಿನ ಮ್ಯಾಗಳಹಟ್ಟಿ ಗ್ರಾಮದ ಸಿದ್ದಪ್ಪ(51) ಎರಿಸ್ವಾಮಿ (20) ಮೃತ ದುರ್ದೈವಿಗಳು. ಇವರು ಕಬ್ಬಿನ ಹೊಲದಲ್ಲಿ ಕುರಿಗಳನ್ನು ನಿಲ್ಲಿಸಿ ಮಲಗಿದ್ದರು. ಕಬ್ಬು ಲೋಡ್ ಮಾಡಿಕೊಳ್ಳತ್ತಾ ರಿವರ್ಸ್ ಬಂದ ಸಮಯದಲ್ಲಿ ಇವರ ಮೇಲೆ ಲಾರಿ ಹರಿದಿದೆ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.