ಚಿಕ್ಕಬಳ್ಳಾಪುರ:- ವರ್ಷವಿಡೀ ಕಷ್ಟಪಟ್ಟು ದುಡಿಯುವ ರೈತರು ಸಂಕ್ರಾಂತಿ ಬಂದರೆ ಸಾಕು ಬೆಳೆದ ಬೆಳೆ, ಜಾನುವಾರು, ಕುಟುಂಬ, ಬಂಧು-ಬಳಗದ ಜೊತೆ ಸುಗ್ಗಿಯನ್ನು ಹುಗ್ಗಿಯನ್ನಾಗಿ ಸಂಭ್ರಮಿಸುವ ಕಾಲವಿತ್ತು. ಆದರೆ ಈ ವರ್ಷ ತೀವ್ರ ಬರಗಾಲ ಹಿನ್ನಲೆ ಸಂಕ್ರಾಂತಿ ಮಾಯವಾಗಿದೆ. ಮತ್ತೊಂದೆಡೆ ಅವರೇಕಾಯಿ, ಕಡಲೇಕಾಯಿ, ಗೆಣಸು ದುಬಾರಿಯಾಗಿದೆ. ಖರೀದಿ ಮಾಡಲಾಗದೇ ಜನ ಹಬ್ಬದ ಸಂದರ್ಭದಲ್ಲೇ ಸಂಕಷ್ಟಕ್ಕೀಡಾಗಿದ್ದಾರೆ.
ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬು ಇಲ್ಲದೇ ಸಂಕ್ರಾಂತಿ ಊಹಿಸಿಕೊಳ್ಳುವುದು ಕಷ್ಟ. ಸಂಕ್ರಾಂತಿಯ ಸುಗ್ಗಿಗೆ ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬು ಬೇಕೇಬೇಕು. ಅವರೇಕಾಯಿ, ಕಡಲೇಕಾಯಿ, ಗೆಣಸನ್ನು ಬೇಯಿಸಿ, ಅದರ ಜೊತೆ ಎಳ್ಳು-ಬೆಲ್ಲ ಸೇರಿಸಿ ಪರಸ್ಪರ ಹಂಚಿ ಶುಭಾಶಯ ಕೋರುವುದು ವಾಡಿಕೆ. ಆದರೆ ಈ ಬಾರಿ ರಾಜ್ಯಾದ್ಯಂತ ತೀವ್ರ ಬರಗಾಲ ಹಿನ್ನಲೆ ಮಳೆಯಿಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರೀಕ್ಷೆಯಷ್ಟು ಅವರೇಕಾಯಿ, ಕಡಲೇಕಾಯಿ, ಗೆಣಸು ಬೆಳೆ ಬಂದಿಲ್ಲ. ಅಲ್ಲಿಷ್ಟು ಇಲ್ಲಿಷ್ಟು ಬೆಳೆದಿರುವ ಅವರೇಕಾಯಿ, ಕಡಲೇಕಾಯಿ, ಗೆಣಸು ಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಇದ್ರಿಂದ ಜಿ ಅವರೇಕಾಯಿಗೆ 80 ರೂಪಾಯಿ, ಕೆಜಿ ಕಡಲೇಕಾಯಿಗೆ 100 ರೂಪಾಯಿ, ಕೆಜಿ ಗೆಣಸು 60 ರೂಪಾಯಿಗೆ ಮಾರಾಟ ಮಾಡುತ್ತಿರುವುದಾಗಿ ಚಿಕ್ಕಬಳ್ಳಾಪುರದ ವ್ಯಾಪಾರಿ ತಿಳಿಸಿದ್ದಾರೆ.
ರೈತರಂತೂ ಸಕಾಲಕ್ಕೆ ಮಳೆ, ಬೆಳೆ ಇಲ್ಲದೇ ಜಮೀನಿನಲ್ಲಿ ಹಸಿರು ನೋಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂ-ತಾಯಿಗೆ ಸಿರಿಇಲ್ಲದ ಮೇಲೆ ಹಬ್ಬ ಮಾಡುವುದಾದರೂ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪೇಟೆಯಲ್ಲಿ ಸರಕು ನಿರೀಕ್ಷೆಯಷ್ಟು ಇಲ್ಲ, ಇದ್ರಿಂದ ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬಿನ ಬೆಲೆ ಕೇಳಿ ಚಿಕ್ಕಬಳ್ಳಾಪುರದ ಗ್ರಾಹಕರು ದಂಗಾಗಿದ್ದಾರೆ