ಹುಬ್ಬಳ್ಳಿ:ಬೆಚ್ಚನೆಯ ಮನೆ ಇರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನ್ನಿರುವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದು ಎಂಬ ಸರ್ವಜ್ಞನ ಮಾತನ್ನು ನಾವೆಲ್ಲ ಕೇಳಿಯೇ ಇದ್ದೇವೆ,ಹಾಗೆಯೇ ಇಲ್ಲೊಂದು ಕುಟುಂಬ ಕೂಡಾ ಸರ್ವಜ್ಞನ ಮಾತಿನಂತೆಯೇ ಇಲ್ಲೊಬ್ಬ ಕೋಟ್ಯಾಧೀಶ ತನ್ನ ಹೆಂಡತಿ ಹಾಗೂ ಮಕ್ಕಳ ಜೊತೆ ಖುಷಿಯಾಗಿ ಇದ್ದ ಆದ್ರೆ ಅದ್ಯಾವ ಶನಿಯ ದೃಷ್ಟಿ ಈ ಕುಟುಂಬದ ಮೇಲೆ ಬಿತ್ತೋ ಗೊತ್ತಿಲ್ಲ ಚೆನ್ನಾಗಿದ್ದ ಕುಟುಂಬದಲ್ಲಿ ಪರಸ್ತ್ರಿ ಆಗಮನವಾಗಿ ಕೋಟ್ಯಾಧೀಶ ಕೊಲೆಯಾಗಿದ್ದಾನೆ.ಅಷ್ಟಕ್ಕೂ ಯಾರಾತ ಯಾರೀ ಕೋಟ್ಯಾಧೀಶ ಅಂತೀರಾ ಅಲ್ವಾ ಈ ಸ್ಟೋರಿ ನೋಡಿ..
ಹೀಗೆ ಫೋಟೋದಲ್ಲಿ ಕಾಣುತ್ತಿರೋ ಈ ಕುಟುಂಬದ ಮನೆಯೊಡೆಯ ಅಶೋಕ ಬ್ಯಾಹಟ್ಟಿ ಹಾಗೂ ಲತಾ ದಂಪತಿಗಳ ಸುಂದರ ಕುಟುಂಬ ಅಶೋಕ ವೃತ್ತಿಯಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿದ್ದ ಆತನ ತಾತನ ಕಾಲದಲ್ಲಿಯೇ ನಗರದ ದುರ್ಗದ ಬೈಲ್ ನಲ್ಲಿ ಪ್ರಸಿದ್ಧ ಟೀ ಅಂಗಡಿ ಇತ್ತು.ಬ್ಯಾಹಟ್ಟಿ ಟೀ ಅಂದ್ರೆ ತುಂಬಾನೇ ಫೇಮಸ್ ಅದೇ ರೀತಿ ಅಶೋಕ ತನ್ನ ಅಜ್ಜ ಹಾಗೂ ಅಪ್ಪನ ಬ್ಯುಸಿನೆಸ್ ಮುಂದುವರೆಸಿಕೊಂಡು ತನ್ನ ಕುಟುಂಬದ ಜೊತೆ ಖುಷಿಯಿಂದ ಇದ್ದ.
ಹೀಗಿರುವಾಗ ಇವರ ಅಂಗಡಿಗೆ ಟೀ ಪುಡಿ ಒಯ್ಯಲು ಲತಾ(ಮೇರಿ) ಎಂಬ ಮಹಿಳೆ ಬರುತ್ತಿದ್ದಳು ಆಗ ಅಶೋಕ ಮತ್ತು ಲತಾಳ ನಡುವೆ ಪ್ರೇಮಾಕುಂರ ಆಗಿ ಅಶೋಕ ತನ್ನ ಮನೆಯನ್ನೇ ಮರೆತು ಬಿಡ್ತಾನೆ.ತನ್ನ ಹೆಂಡತಿ ಮಕ್ಕಳ ಬಗ್ಗೆ ಯಾವುದನ್ನು ಕೂಡಾ ವಿಚಾರ ಮಾಡದೆ ಲತಾಳ ಪ್ರೇಮ ಪಾಶದಲ್ಲಿ ಬಿದ್ದು ಆಕೆ ಹೇಗೆ ಹೇಳ್ತಾಳೆ ಹಾಗೆ ಕೇಳಲು ಶುರು ಮಾಡ್ತಾನೆ,ಅಷ್ಟೇ ಅಲ್ಲದೆ ಕ್ರಿಶ್ಚಿಯನ್ ಧರ್ಮದ ಬಗ್ಗೆ ಆತನ ತಲೆಯಲ್ಲಿ ಆತನಿಗೆ ಹಿಂದೂ ದೇವರಗಳ ಮೇಲಿನ ಭಕ್ತಿಯನ್ನು ಕೂಡಾ ಕಡಿಮೆ ಮಾಡ್ತಾಳೆ.ಹೀಗಾಗಿ ಅಶೋಕ ತನ್ನ ಅಂಗಡಿಯಲ್ಲಿದ್ದ ಹಿಂದೂ ದೇವರ ಫೋಟೋಗಳನ್ನು ಒಗೆದು ಬೈಬಲ್ ಹಿಡಿದುಕೊಂಡು ಓಡಾಡಲು ಶುರು ಮಾಡ್ತಾನೆ.
ನಿನ್ನೇ ರಾತ್ರಿ ಏಕಾಏಕಿ ಮೇರಿಯ ಮಗ ಅಶೋಕನ ಮಕ್ಕಳಿಗೆ ನಿಮ್ಮ ತಂದೆ ಸಾವನಪ್ಪಿದ್ದಾನೆ ನಾವು ಬಾಡಿ ತಗೊಂಡು ಹೋಗುತ್ತಿದ್ದೇವೆ ಅಂತಾ ವಾಟ್ಸಪ್ ಮೂಲಕ ವಾಯ್ಸ್ ಮೆಸೇಜ್ ಕಳುಹಿಸಿದ ನಂತರ ಕುಟುಂಬದವರಿಗೆ ವಿಷಯ ಗೊತ್ತಾಗಿ,ನಮ್ಮ ತಂದೆಗೆ ಸ್ಲೋ ಪಾಯಿಸನ್ ನೀಡಿ ಕೊಲೆ ಮಾಡಿದ್ದಾರೆ ಅಂತಾ ಮೇರಿ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆಸ್ತಿಯನ್ನು ಕಬಳಿಸುವ ಸಲುವಾಗಿ ಲತಾ(ಮೇರಿ)ಪ್ರತಿ ನಿತ್ಯವೂ ಕೂಡಾ ಸ್ವಲ್ಪ ಸ್ವಲ್ಪ ವಿಷವನ್ನು ಕೊಟ್ಟು ಆತನ ಕೊಲೆ ಮಾಡಿದ್ದಾರೆ ಅಂತಾ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಅಶೋಕನ ಮಗ ಪ್ರಕರಣ ದಾಖಲು ಮಾಡಿದ್ದಾನೆ.ಸದ್ಯ ಅಶೋಕನ ಈ ಅನುಮಾನಾಸ್ಪದ ಸಾವಿನ ರಹಸ್ಯ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದ ನಂತರದಲ್ಲಿ ಮೇರಿಯ ಮರ್ಮ ಏನೆಂದು ತಿಳಿದು ಬರಲಿದೆ.