ಹುಬ್ಬಳ್ಳಿ:- UPA,NDA ಅವಧಿಯ ಅನುದಾನದ ಕುರಿತು ಶ್ವೇತ ಪತ್ರ ಹೊರಡಿಸಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯಕ್ಕೆ ಹಿಂದಿನ ಯುಪಿಎ ಸರ್ಕಾರದಲ್ಲಿ ಎಷ್ಟು ಅನುದಾನ ಬಂದಿದೆ, ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎನ್ಎ ಸರ್ಕಾರದಲ್ಲಿ ಎಷ್ಟು ಬಂದಿದೆ ಎಂಬುದರ ಬಗ್ಗೆ ಸಿಎಂ ಶ್ವೇತಪತ್ರ ಹೊರಡಿಸಲಿ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಂಕಿ-ಅಂಶ ಮುಚ್ಚಿಟ್ಟು ಕೇಂದ್ರದ ವಿರುದ್ದ ಸುಳ್ಳು ಆರೋಪ ಮಾಡುತ್ತಿದೆ.2004ರಿಂದ 2014ರ ವರೆಗೆ ಕಾಂಗ್ರೆಸ್ ಸರ್ಕಾರದ ಡಾ.ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ರಾಜ್ಯಕ್ಕೆ ತೆರಿಗೆ ಪಾಲು ಮತ್ತು ಅನುದಾನ ಎಷ್ಟು ಕೊಟ್ಟಿದ್ದಾರೆ ತಿಳಿಸಬೇಕು.
ನರೇಂದ್ರ ಮೋದಿ ಅವರು ಕೊಟ್ಟ ಅನುದಾನ ಎಷ್ಟು ಎಂಬುದರ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.
ಪ್ರಧಾನಿ ಮೋದಿ ಅನುದಾನ ಕಡಿಮೆ ಕೊಟ್ಟಿದ್ದರೆ ನಾವು ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಒಪ್ಪಿಕೊಂಡು ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕುವುದಿಲ್ಲ.ನೀವು ಇದೇ ಸವಾಲನ್ನು ಸ್ವೀಕರಿಸಿ, ಸುಳ್ಳೆ ನಮ್ಮ ಮನೆ ದೇವರು ಎಂದು ಕ್ಷಮಾಪಣೆ ಕೇಳಿ ಅಭ್ಯರ್ಥಿ ನಿಲ್ಲಸಲ್ಲ ಎಂದು ಘೋಷಣೆ ಮಾಡಿ ಎಂದರು.