ಮುಂಬೈ:- ಹೃದಯಾಘಾತದಿಂದ ಸಂಗೀತದ ಮೇರು ಗಾಯಕಿ 92 ವರ್ಷದ ಡಾ.ಪ್ರಭಾ ಅತ್ರೆ ಅವರು ಇಂದು ನಿಧನರಾದರು.
ಪ್ರಭಾ ಅವರು ಶನಿವಾರ ನಸುಕಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ದೀನನಾಥ ಮಂಗೇಶ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ, ಅವರು ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು.
ಬಹುಮುಖಿ ವ್ಯಕ್ತಿತ್ವದ ಪ್ರಭಾ ಅವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ದಶಕಗಳಿಂದ ಕಿರಾಣಾ ಘರಾಣಾ ಗಾಯನ ಶೈಲಿಯನ್ನು ಪ್ರತಿನಿಧಿಸಿದ್ದರು. 1932ರ ಸೆಪ್ಟೆಂಬರ್ 13ರಂದು ಜನಿಸಿದ್ದ ಪ್ರಭಾ ಅವರು ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶಿಕ್ಷಣತಜ್ಞೆಯಾಗಿಯೂ ಹೆಸರಾಗಿದ್ದರು. ಕರ್ನಾಟಕದೊಂದಿಗೆ, ವಿಶೇಷವಾಗಿ ಹುಬ್ಬಳ್ಳಿ–ಧಾರವಾಡದೊಂದಿಗೆ ಅವರು ವಿಶೇಷ ನಂಟನ್ನು ಹೊಂದಿದ್ದರು.