ಹರಿಯಾಣ: ಕಳೆದ ಒಂದು ವಾರಗಳ ಹಿಂದೆಯಷ್ಟೇ ಗುರುಗ್ರಾಮ್ನ ಹೋಟೆಲ್ವೊಂದರಲ್ಲಿ (Gurugram Hotel) ಗುಂಡು ಹಾರಿಸಿ ಹತ್ಯೆಗೀಡಾದ ಮಾಜಿ ಮಾಡೆಲ್ ದಿವ್ಯಾ ಪಹುಜಾ (Divya Pahuja) ಅವರ ಮೃತದೇಹವು ಹರಿಯಾಣದ ಕಾಲುವೆಯಲ್ಲಿ ಪತ್ತೆಯಾಗಿದೆ. ಪಂಜಾಬ್ನ ಭಾಕ್ರಾ ಕಾಲುವೆಯಲ್ಲಿ ಮೃತದೇಹವನ್ನು ಎಸೆಯಲಾಗಿದ್ದು, ಪಕ್ಕದ ರಾಜ್ಯಕ್ಕೆ ತೇಲಿಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ಕಾಲುವೆಯಲ್ಲಿ ಪತ್ತೆಯಾದ ಮೃತದೇಹವನ್ನು ಗುರುಗ್ರಾಮ್ ಪೊಲೀಸರ ತಂಡವು ಹೊರತೆಗೆದು, ಪಹುಜಾ ಕುಟುಂಬಕ್ಕೆ ಫೋಟೋಗಳನ್ನ ಕಳುಹಿಸಿದೆ. ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಕೊಲೆಯಾದ ಮರುದಿನ (ಜನವರಿ 3) ಪಂಜಾಬ್ನ ಕಾಲುವೆಯಲ್ಲಿ ಶವವನ್ನು ಎಸೆದಿರುವುದಾಗಿ ಆರೋಪಿಗಳಲ್ಲಿ ಒಬ್ಬ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಅಯೋಧ್ಯೆಯಲ್ಲಿ ಮೊಳಗಲಿದೆ ಕನ್ನಡದ ಹಾಡು!,, “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ” ಗೀತೆ
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಆರೋಪಿ ಬಾಲರಾಜ್ ಗಿಲ್ ಎಂಬಾತನನ್ನು ಗುರುಗ್ರಾಮ್ ಪೊಲೀಸರ ತಂಡ ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಆರೋಪಿ, ಜನವರಿ 2 ರಂದು ಕೊಲೆ ಮಾಡಿ, ಮರುದಿನ ಗುರುಗ್ರಾಮ್ನಿಂದ ಸುಮಾರು 270 ಕಿಮೀ ದೂರದಲ್ಲಿರುವ ಪಟಿಯಾಲದ ಕಾಲುವೆಯಲ್ಲಿ ಎಸೆದಿದ್ದೆವು ಎಂದು ಒಪ್ಪಿಕೊಂಡಿದ್ದ. ಆರೋಪಿ ಹೇಳಿಕೆ ಪಡೆದು ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಹರಿಯಾಣದ ಕಾಲುವೆಯಲ್ಲಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.